ಕ್ರಿಕೆಟ್

ಪಾಕಿಸ್ತಾನಕ್ಕೆ ಮತ್ತೆ ಮುಳುವಾದ ಭಯೋತ್ಪಾದನೆ; ಪಾಕ್‌-ಆಫ್ಘನ್‌ ಕ್ರಿಕೆಟ್‌ ಸರಣಿ ರದ್ದು

Srinivasamurthy VN

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಹೆ ಭಯೋತ್ಪಾದನೆ ಬೆನ್ನು ಬಿಡದ ಭೂತದಂತೆ ಕಾಡುತ್ತಿದ್ದು, ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಕ್ರಿಕೆಟ್ ಸರಣಿ ಕೂಡ  ರದ್ದಾಗಿದೆ.

ಕಳೆದ ವಾರ ಪಾಕಿಸ್ತಾನದ ಲಾಹೋರ್ ನಲ್ಲಿ ಉಗ್ರಗಾಮಿಗಳು ಸ್ಫೋಟಿಸಿದ್ದ ಪ್ರಬಲ ಬಾಂಬ್ ಸ್ಫೋಟ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಸರಣಿಗೆ ಮುಳುವಾಗಿದ್ದು,  ಘಟನೆಯಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಯನ್ನು ರದ್ದು ಮಾಡಲು ನಿರ್ಧರಿಸಿದೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಸಿಬಿ,  ಆಟಗಾರರ ಭದ್ರತೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರುತ್ತಿರುವುದಾಗಿ ಪಿಸಿಬಿ ವಕ್ತಾರ ಅಮ್ಜದ್‌ ಭಟ್ಟಿ ಶುಕ್ರವಾರ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪಿಸಿಬಿ ಅಫ್ಘಾನಿಸ್ಥಾನ ವಿರುದ್ಧ 3   ಏಕದಿನ ಪಂದ್ಯ ಮತ್ತು ಪಾಕಿಸ್ಥಾನ "ಎ' ತಂಡದ ವಿರುದ್ಧ 4 ದಿನಗಳ ಒಂದು ಟೆಸ್ಟ್ ಪಂದ್ಯವನ್ನು ಆಡಲು ನಿರ್ಧರಿಸಿತ್ತು.

ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಈ ಸರಣಿಯ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿತ್ತು. ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಈ ಸರಣಿ ಪ್ರಯೋಜನವಾಗಲಿದೆ ಎಂದು ಆಫ್ಘನ್ ಕ್ರಿಕೆಟ್  ಸಂಸ್ಥೆ ಹೇಳಿತ್ತು. ಆದರೆ ಪಿಸಿಬಿಯ ನಿರ್ಧಾರದಿಂದಾಗಿ ಆಘಾತಕ್ಕೊಳಗಾಗಿರುವ ಆಫ್ಘನ್ ಕ್ರಿಕೆಚ್ ಸಂಸ್ಥೆ ದುಬೈನಲ್ಲಾದರೂ ಸರಣಿಯನ್ನು ನಡೆಸಿ ಎಂದು ಪಿಸಿಬಿಗೆ ಮನವಿ ಮಾಡಿದೆ. ಅಪ್ಘನ್  ಕ್ರಿಕೆಟ್ ಸಮಿತಿಯ ಈ ಮನವಿಗೆ ಈವರೆಗೂ ಪಿಸಿಬಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕ್ರಿಕೆಟ್ ಹೆ ಭಯೋತ್ಪಾದನೆ ಬೆನ್ನು ಬಿಡದ ಭೂತದಂತೆ ಕಾಡುತ್ತಿದ್ದು, ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಕ್ರಿಕೆಟ್ ಸರಣಿ ಕೂಡ  ರದ್ದಾಗಿದೆ.

ಕಳೆದ ವಾರ ಪಾಕಿಸ್ತಾನದ ಲಾಹೋರ್ ನಲ್ಲಿ ಉಗ್ರಗಾಮಿಗಳು ಸ್ಫೋಟಿಸಿದ್ದ ಪ್ರಬಲ ಬಾಂಬ್ ಸ್ಫೋಟ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಸರಣಿಗೆ ಮುಳುವಾಗಿದ್ದು,  ಘಟನೆಯಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಯನ್ನು ರದ್ದು ಮಾಡಲು ನಿರ್ಧರಿಸಿದೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಸಿಬಿ,  ಆಟಗಾರರ ಭದ್ರತೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರುತ್ತಿರುವುದಾಗಿ ಪಿಸಿಬಿ ವಕ್ತಾರ ಅಮ್ಜದ್‌ ಭಟ್ಟಿ ಶುಕ್ರವಾರ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪಿಸಿಬಿ ಅಫ್ಘಾನಿಸ್ಥಾನ ವಿರುದ್ಧ 3   ಏಕದಿನ ಪಂದ್ಯ ಮತ್ತು ಪಾಕಿಸ್ಥಾನ "ಎ' ತಂಡದ ವಿರುದ್ಧ 4 ದಿನಗಳ ಒಂದು ಟೆಸ್ಟ್ ಪಂದ್ಯವನ್ನು ಆಡಲು ನಿರ್ಧರಿಸಿತ್ತು.

ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಈ ಸರಣಿಯ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿತ್ತು. ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಈ ಸರಣಿ ಪ್ರಯೋಜನವಾಗಲಿದೆ ಎಂದು ಆಫ್ಘನ್ ಕ್ರಿಕೆಟ್  ಸಂಸ್ಥೆ ಹೇಳಿತ್ತು. ಆದರೆ ಪಿಸಿಬಿಯ ನಿರ್ಧಾರದಿಂದಾಗಿ ಆಘಾತಕ್ಕೊಳಗಾಗಿರುವ ಆಫ್ಘನ್ ಕ್ರಿಕೆಚ್ ಸಂಸ್ಥೆ ದುಬೈನಲ್ಲಾದರೂ ಸರಣಿಯನ್ನು ನಡೆಸಿ ಎಂದು ಪಿಸಿಬಿಗೆ ಮನವಿ ಮಾಡಿದೆ. ಅಪ್ಘನ್  ಕ್ರಿಕೆಟ್ ಸಮಿತಿಯ ಈ ಮನವಿಗೆ ಈವರೆಗೂ ಪಿಸಿಬಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭೀಕರ ಉಗ್ರದಾಳಿ ನಡೆದಿತ್ತು. ಮುಂಬೈ ದಾಳಿ ಮಾದರಿಯಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಶ್ರೀಲಂಕಾದ ಆಟಗಾರರಿಗೆ ಗುಂಡೇಟು ಬಿದ್ದಿತ್ತು. ಹೆಲಿ ಆ್ಯಂಬುಲೆನ್ಸ್ ಮೂಲಕ ಗಾಯಾಳು ಲಂಕಾ ಆಟಗಾರರನ್ನು ರಕ್ಷಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಪಾಕಿಸ್ತಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.

SCROLL FOR NEXT