ಸುರೇಶ್ ರೈನಾ 
ಕ್ರಿಕೆಟ್

ಪತ್ರಕರ್ತರ 'ಕೋಚ್‌' ಪ್ರಶ್ನೆಗೆ 'ಚುರುಕು' ಉತ್ತರ ನೀಡಿದ ರೈನಾ

ಟೀಂ ಇಂಡಿಯಾಗೆ ವಿದೇಶಿಗ ಕೋಚ್ ಬೇಕೋ, ಭಾರತೀಯ ಕೋಚ್ ಬೇಕೋ? ಎಂದು ಪತ್ರಕರ್ತರೊಬ್ಬರು ರೈನಾಗೆ ಪ್ರಶ್ನೆ ಕೇಳಿದ್ದರು....

ನವದೆಹಲಿ: ಪತ್ರಕರ್ತರು ಅದ್ಯಾವ ರೀತಿಯ ಪ್ರಶ್ನೆಯನ್ನು ಕೇಳಿದರೂ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅದಕ್ಕೆ ಹಾಸ್ಯದ ಧಾಟಿಯಲ್ಲೇ ಉತ್ತರಿಸುತ್ತಾರೆ. ಧೋನಿಯವ ಪ್ರಭಾವವೋ ಎಂಬಂತೆ ಇದೀಗ ಸುರೇಶ್ ರೈನಾ ಕೂಡಾ ಅದೇ ರೀತಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವುದು ಸುದ್ದಿಯಾಗಿದೆ.
ಟೀಂ ಇಂಡಿಯಾಗೆ ವಿದೇಶಿಗ ಕೋಚ್ ಬೇಕೋ, ಭಾರತೀಯ ಕೋಚ್ ಬೇಕೋ? ಎಂದು ಪತ್ರಕರ್ತರೊಬ್ಬರು ರೈನಾಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ರೈನಾ, ನೀವು ನಿಮ್ಮ ಹೆಂಡತಿಯೊಂದಿಗೆ ನೆಮ್ಮದಿಯಿಂದ ಇರುತ್ತೀರೋ ಅಥವಾ ಇನ್ನೊಬ್ಬನ ಹೆಂಡತಿಯೊಂದಿಗೆ? ಎಂದು ಉತ್ತರಿಸಿದ ಕೂಡಲೇ ಅಲ್ಲಿ ನಗೆಯ ಅಲೆ ತೇಲಿ ಬಂತು.
ಟಿ20 ವಿಶ್ವಕಪ್ ಮುಗಿದ ನಂತರ ಟೀಂ ಇಂಡಿಯಾ ಹೊಸ ಕೋಚ್‌ನ ಹುಡುಕಾಟದಲ್ಲಿದೆ. ಕೋಚ್ ಸ್ಥಾನಕ್ಕೆ  ಹಲವಾರು ಕ್ರಿಕೆಟಿಗರ ಹೆಸರು ಕೇಳಿ ಬರುತ್ತಿದ್ದರೂ, ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ.
ಶನಿವಾರ ಆರಂಭವಾಗಲಿರುವ ಐಪಿಎಲ್ ಟೂರ್ನಮೆಂಟ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ರೈನಾ ಮುನ್ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್