ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ (ಸಂಗ್ರಹ ಚಿತ್ರ) 
ಕ್ರಿಕೆಟ್

ಹಣದ ಮೇಲಿನ ನಿಷ್ಠೆಗೆ ಟಿ20 ಚಾಂಪಿಯನ್ ವಿಂಡೀಸ್ ಉದಾಹರಣೆ: ಸ್ಟೀವ್ ವಾ

ಟಿ20 ಕ್ರಿಕೆಟ್ ಇತರೆ ಮಾದರಿ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದಕ್ಕೆ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಉತ್ತಮ ಉದಾಹರಣೆ ಎಂದು ಮಾಜಿ ನಾಯಕ ಸ್ಟೀವ್ ವಾ ಅಭಿಪ್ರಾಯಪಟ್ಟಿದ್ದಾರೆ...

ಬರ್ಲಿನ್: ಜಗತ್ತಿನಾದ್ಯಂತ ಆಯೋಜನೆಯಾಗುತ್ತಿರುವ ಟಿ20 ಲೀಗ್ ಗಳು ಕೇವಲ ಹಣದ ಮೇಲಿನ ನಿಷ್ಠೆಯನ್ನು ಉತ್ತೇಜಿಸುತ್ತಿದ್ದು, ಇದರಿಂದ ಕ್ರಿಕೆಟ್ ನ ಇತರೆ ಮಾದರಿ ಮೇಲೆ ದುಷ್ಪರಿಣಾಮ  ಬೀರುತ್ತಿದೆ. ಇದಕ್ಕೆ ಇತ್ತೀಚೆಗಿನ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಉತ್ತಮ ಉದಾಹರಣೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ  ಅಭಿಪ್ರಾಯಪಟ್ಟಿದ್ದಾರೆ.

ಬರ್ಲಿನ್ ನಲ್ಲಿ ನಡೆದ ಲಾರಿಯಸ್ ವಿಶ್ವ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟೀವ್ ವಾ ಅವರು, ಹಣದ ಮೇಲಿನ ನಿಷ್ಠೆಯಿಂದಾಗಿ  ಟಿ20 ಲೀಗ್ ಗಳನ್ನು ಆಯೋಜನೆ ಮಾಡುತ್ತಿರುವುದರಿಂದ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪದ ಆಟಗಳಲ್ಲಿ ಪರಿಪೂರ್ಣ ಸಮತೋಲನ ಸಾಧಿಸುವುದು ಅಸಾಧ್ಯವಾಗಿದೆ. ಆದಾಗ್ಯೂ ಭಾರತ,  ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಕ್ರಿಕೆಟ್ ಯಶಸ್ವಿಯಾಗಿದೆ ಎಂದು ಹೇಳಿದರು.

ಕ್ರಿಕೆಟ್ ಇತರೆ ಮಾದರಿಗಳ ಮೇಲೆ ಟ್ವೆಂಟಿ 20 ಕ್ರಿಕೆಟ್ ನ  ಪರಿಣಾಮದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸ್ಟೀವ್ ವಾ, ಟಿ 20 ಲೀಗ್‌ಗಳಲ್ಲಿ ನೀಡುವ ಪ್ರೋತ್ಸಾಹಕಗಳು ಮತ್ತು ಯಥೇಚ್ಛ ಹಣ  ರಾಷ್ಟ್ರೀಯ ಕ್ರಿಕೆಟ್ ಕರ್ತವ್ಯದತ್ತ ಆಟಗಾರರ ನಿಷ್ಠೆ ಕುಂಠಿತಗೊಳ್ಳುವಂತೆ ಮಾಡುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸಮನ್ ಬ್ರೆಂಡನ್ ಮೆಕಲಮ್ ಟಿ20  ಮಾದರಿ ಕ್ರಿಕೆಟ್ ನಲ್ಲಿ ಮುಂದುವರೆಯುವುದಕ್ಕಾಗಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕೇವಲ ಮೆಕ್ಕಲಮ್ ಮಾತ್ರವಲ್ಲ ವಿಶ್ವದ ನಾನಾ ತಂಡಗಳ ಖ್ಯಾತನಾಮ ಕ್ರಿಕೆಟಿಗರು ಕೂಡ ಟಿ20 ಗೆ  ಮಾರುಹೋಗಿ ಕ್ರಿಕೆಟ್ ನ ಮೂಲ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ ಎಂದು ವಾ ವಿಷಾಧ ವ್ಯಕ್ತಪಡಿಸಿದರು.

ನನ್ನ ಪ್ರಕಾರ ಮೆಕ್ಕಲಮ್ ಪ್ರತಿಭಾವಂತ ಕ್ರಿಕೆಟಿಗರಾಗಿದ್ದು, ಅವರಲ್ಲಿ ಇನ್ನೂ 3-4 ವರ್ಷ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ. ಹೀಗಿದ್ದೂ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದರು.  ಮೆಕ್ಕಲಮ್ ತಮ್ಮ ಕುಟುಂಬದ ಹಿತದೃಷ್ಟಿಯಿಂದ ನಿವೃತ್ತಿಗೆ ಯೋಚಿಸಿರುವುದು ಸರಿಯಾಗಿದೆ. ಆದರೆ ಟಿ20 ಮಾದರಿ ಕ್ರಿಕೆಟ್ ಗೆ ಆಕರ್ಷಿತರಾಗಿರುವ ಯುವ ಕ್ರಿಕೆಟಿಗರ ನಿಷ್ಠೆ ಕುಂಠಿತವಾಗಿದ್ದು,  ಹಣದ ಮೇಲಿನ ನಿಷ್ಠೆ ಹೆಚ್ಚಾಗಿದೆ. ನಾನು ಯಾವುದೇ ಆಟಗಾರರ ವಿರುದ್ಧ ಆರೋಪಿಸುವುದಿಲ್ಲ. ಆದರೆ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗುತ್ತದೆ ಎಂದು ವಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT