ಹೈದರಾಬಾದ್: ಐಪಿಎಲ್ 9ನೇ ಆವೃತ್ತಿಯ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿದ ತಪ್ಪಿಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಬರೀಂದರ್ ಸಿಂಗ್ ಸರ್ನ್‌ಗೆ ಐಪಿಎಲ್ ಶಿಸ್ತು ಸಮಿತಿ ದಂಡ ವಿಧಿಸಿದೆ.
ಕ್ರೀಡಾಸ್ಪೂರ್ತಿ ಮರೆತು ನಡೆದುಕೊಂಡ ಬರೀಂದರ್ ಸಿಂಗ್ ಸರ್ನ್ ಗೆ ಐಪಿಎಲ್ ಶಿಸ್ತು ಸಮಿತಿ ಪಂದ್ಯ ಸಂಭಾವನೆಯಲ್ಲಿ ಶೇ. 10ರಷ್ಟು ದಂಡ ವಿಧಿಸಲಾಗಿದೆ.
ಮುಂಬೈ ತಂಡದ ಆರಂಭಿಕ ಪಾರ್ಥಿವ್ ಪಟೇಲ್‌ರನ್ನು ಔಟ್ ಮಾಡಿದ ಬಳಿಕ ಚಪ್ಪಾಳೆ ತಟ್ಟಿದ್ದಲ್ಲದೆ, ಮೈದಾನದಿಂದ ಹೊರಹೋಗುವಂತೆ ಸನ್ನೆ ಮಾಡಿದ್ದರು.
ಐಪಿಎಲ್ ನಿಯಮಾವಳಿಯ 2.1.7ರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಸರ್ನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಪಂದ್ಯ ರೆಫರಿ ರೋಶನ್ ಮಹಾನಾಮ ದಂಡ ವಿಧಿಸಿದ್ದಾರೆ.