ರಾಜ್ ಕೋಟ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಸನ್ ರೈಸರ್ಸ್ 10 ವಿಕೆಟ್ ಗಳಿಂದ ಜಯ ಗಳಿಸಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಸನ್'ರೈಸರ್ಸ್ ಪಂದ್ಯದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಗುಜರಾತ್ ಲಯನ್ಸ್ ತಂಡವನ್ನು 135 ರನ್ ಗಳಿಗೆ ಕಟ್ಟಿ ಹಾಕಿದರು. 136 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ಪರ ಆರಂಭಿಕರಾದ ಡೇವಿಡ್ ವಾನ೯ರ್ ಅಜೇಯ 74 ಶಿಖರ್ ಧವನ್ ಅಜೇಯ 53 ರನ್ ಗಳ ಬಿರುಸಿನ ಆಟವಾಡಿ 14.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 137 ರನ್ ಗಳ ಗುರಿ ಮುಟ್ಟಿದರು.
ಗುಜರಾತ್ ಪರ ಆರನ್ ಫಿ೦ಚ್ 0, ಮೆಕ್ಕಲ೦ 18, ಸುರೇಶ್ ರೈನಾ 75, ದಿನೇಶ್ 8, ಬ್ರಾವೊ 8, ಜಡೇಜಾ 14, ಅಕ್ಷದೀಪ್ 5, ಸ್ಟೈನ್ 1, ಪ್ರವೀಣ್ ಕುಮಾರ್ ಔಟಾಗದೆ 1 ರನ್ ಗಳಿಸಿದ್ದಾರೆ.
ಸನ್ ರೈಸರ್ಸ್ ಪರ ಭುವನೇಶ್ವರ್ ಕುಮಾರ್ 4, ಬರೀ೦ದರ್ ಸನ್‍೯, ಮುಸ್ತಾಫಿಜುರ್ ರೆಹಮಾನ್, ದೀಪಕ್ ಹೂಡಾ, ಬಿಪುಲ್ ಶಮ೯ ತಲಾ ಒಂದು ವಿಕೆಟ್ ಪಡೆದಿದ್ದಾರೆ.