ಸಿಂಹದ ಮುಂದೆ ಕುಳಿತು ರವೀಂದ್ರ ಜಡೇಜಾ ಮತ್ತು ಪತ್ನಿ ಫೋಟೋ 
ಕ್ರಿಕೆಟ್

ಸಿಂಹಗಳೊಂದಿಗೆ ಸೆಲ್ಫಿ: ಕ್ರಿಕೆಟಿಗ ರವೀಂದ್ರ ಜಡೇಜಾಗೆ 20,000 ರು. ದಂಡ

ಗುಜರಾತ್​ನ ಗಿರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಿಂಹಗಳೊಂದಿಗೆ ಸೆಲ್ಫಿ ತೆಗೆದುಕೊಂಡು ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟಿಗ ರವೀಂದ್ರ...

ಅಹಮದಾಬಾದ್: ಗುಜರಾತ್​ನ ಗಿರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಿಂಹಗಳೊಂದಿಗೆ ಸೆಲ್ಫಿ ತೆಗೆದುಕೊಂಡು ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರಿಗೆ ಗುಜರಾತ್ ಅರಣ್ಯ ಇಲಾಖೆ 20 ಸಾವಿರ ರುಪಾಯಿ ದಂಡ ವಿಧಿಸಿದೆ.
ಸದ್ಯ ರವೀಂದ್ರ ಜಡೇಜಾ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಅವರ ಮಾವ ಹರ್​ದೇವ್​ಸಿಂಗ್ ಸೋಲಂಕಿ ಅವರು ಜಡೇಜಾ ಪರವಾಗಿ ದಂಡ ಪಾವತಿಸಿದ್ದಾರೆ. ಜತೆಗೆ ಹೇಳಿಕೆಯನ್ನೂ ಪಡೆದಿದ್ದೇವೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶೀಘ್ರ ಅರಣ್ಯ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಸಿಂಗ್ ಅವರು ಹೇಳಿದ್ದಾರೆ.
ಕಳೆದ ಜೂನ್ 17 ರಂದು ರವೀಂದ್ರ ಜಡೇಜಾ ಗಿರ್ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಾಹನದಿಂದ ಕೆಳಗಿಳಿದ ಜಡೇಜಾ ಮತ್ತು ಅವರ ಪತ್ನಿ ಸಿಂಹಗಳ ಮುಂದೆ ಫೋಟೋ ತೆಗೆಸಿದ್ದಾರೆ. ಇದಲ್ಲದೆ ಅಲ್ಲಿನ ಅರಣ್ಯ ಸಿಬ್ಬಂದಿಯೊಡನೆ ಸೆಲ್ಪಿ ತೆಗೆದುಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಹೀಗಾಗಿ ಇಲಾಖೆ ತನಿಖೆಗೆ ಆದೇಶ ಹೊರಡಿಸಿದೆ.
ಗಿರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರವಾಸಿಗರು ವಾಹನದಿಂದ ಕೆಳಗಿಳಿಯುವಂತಿಲ್ಲ. ಆದರೆ ಪೋಟೋಗಳಲ್ಲಿ ಜಡೇಜಾ ಅವರು ವಾಹನದಿಂದ ಕೆಳಗಿಳಿದು ಸಿಂಹಗಳ ಮುಂದೆ ಫೋಟೋ ತೆಗೆಸಿದ್ದು ಸ್ಪಷ್ಟವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ದೆಹಲಿ ಚಲೋ’ ಪ್ರತಿಭಟನೆಗೆ ಬ್ರೇಕ್: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video