ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.
ಡರೇನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ವೆಸ್ಟ್ ಇಂಡೀಸ್ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಅನುಭವಿಸಿತು. ಈ ಮಧ್ಯೆ ಟೀಂ ಇಂಡಿಯಾಗೆ ಆಸರೆಯಾಗಿದ್ದು ಕನ್ನಡಿಗ ಕೆಎಲ್ ರಾಹುಲ್ ಹಾಗೂ ಆಲ್ ರೌಂಡರ್ ಆರ್ ಅಶ್ವಿನ್. ಈ ಇಬ್ಬರ ಅರ್ಧಶತಕ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿತು.
ಆರಂಭಿಕರಾಗಿ ಬಂಧ ಕೆಎಲ್ ರಾಹುಲ್ 50 ರನ್ ಗಳಿಸಿ ಔಟಾದರೆ, ಶಿಖರ್ ಧವನ್ 1 ರನ್ ಗೆ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಸಹ ಕಮಾಲ್ ಮಾಡುವಲ್ಲಿ ವಿಫಲರಾದರು. 3 ರನ್ ಗಳಿಸಿ ಕೊಹ್ಲಿ ಔಟಾದರು. ಬಳಿಕ ಬಂದ ಅಂಜಿಕ್ಯ ರಹಾನೆ ತಂಡಕ್ಕೆ ಚೇತರಿಕೆ ನೀಡಿದರು. 35 ರನ್ ಗಳಿಸಿದ್ದ ರಹಾನೆ ನಿರ್ಗಮನದ ಬಳಿಕ ಬಂದ ರೋಹಿಶ್ ಶರ್ಮಾರ ಸ್ಫೋಟಕ ಆಟ ಪ್ರೇಕ್ಷಕರಿಗೆ ಕಾಣಲಿಲ್ಲ. ರೋಹಿತ್ ಸಹ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ 9 ರನ್ ಗಳಿಸಿ ಔಟಾದರು.
ಬಳಿಕ ಬಂದ ಆರ್ ಅಶ್ವಿನ್ ಹಾಗೂ ವೃದ್ಧಿಮಾನ್ ಸಾಹಾ ತಂಡಕ್ಕೆ ಕೊಂಚ ಚೇತರಿಕೆ ತಂದು ಕೊಟ್ಟರು. ಅಶ್ವಿನ್ ಅಜೇಯ 75 ರನ್ ಹಾಗೂ ಸಾಹಾ ಅಜೇಯ 46 ರನ್ ತಂಡ ಅಲ್ಪ ಮೊತ್ತಕ್ಕೆ ಔಟಾಗುವುದರಿಂದ ತಪ್ಪಿಸಿದರು.
ವೆಸ್ಟ್ ಇಂಡೀಸ್ ಪರ ಜೋಸೆಫ್, ಚೇಸ್ ತಲಾ 2 ವಿಕೆಟ್ ಪಡೆದರೆ, ಗೇಬ್ರಿಯಲ್ 1 ವಿಕೆಟ್ ಪಡೆದಿದ್ದಾರೆ.