ನವದೆಹಲಿ: ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಕನ್ನಡಿಗ ಅನಿಲ್ ಕುಂಬ್ಳೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಾರ್ಷಿಕ 6.25 ಕೋಟಿ ರುಪಾಯಿ ಸಂಭಾವನೆ ನೀಡುತ್ತಿದೆ.
ಅನಿಲ್ ಕುಂಬ್ಳೆ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದರು. ಇದೀಗ ವೆಸ್ಟ್ ವಿಂಡೀಸ್ ವಿರುದ್ಧದ ಸರಣಿಯನ್ನು ಟೀಂ ಇಂಡಿಯಾ ಗೆದ್ದಿದೆ. ಇನ್ನು ಅನಿಲ್ ಕುಂಬ್ಳೆ ಸಂಭಾವನೆ ಕುರಿತಂತೆ ಸೋಮವಾರ ಬಿಸಿಸಿಐ ಹಣಕಾಸು ಸಮಿತಿ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುಂಬ್ಳೆಗೆ 6.25 ಕೋಟಿ ರುಪಾಯಿ ಸಂಭಾವನೆ ನೀಡುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ.
ಟೀಂ ಇಂಡಿಯಾದ ಮಾಜಿ ಡೈರೆಕ್ಟರ್ ರವಿಶಾಸ್ತ್ರಿ ವಾರ್ಷಿಕವಾಗಿ 7 ಕೋಟಿ ರು. ಸಂಭಾವನೆ ಪಡೆಯುತ್ತಿದ್ದರು.