ಪೋರ್ಟ್ ಆಫ್ ಸ್ಪೇನ್(ಟ್ರೆನಿಡಾಡ್): ಟೀಂ ಇಂಡಿಯಾ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡ ಹಿನ್ನೆಲೆ ಪ್ರತಿಕ್ರಿಯಿಸಿದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಾವು ರ್ಯಾಂಕಿಂಗ್ ಗಾಗಿ ಆಡುವುದಿಲ್ಲ ಎಂದು ಹೇಳಿದ್ದಾರೆ.
ರ್ಯಾಂಕಿಂಗ್ ಎಂಬುದು ಕೇವಲ ಒಂದು ಮಾನದಂಡವಷ್ಟೇ. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಡ್ರಾಗೊಳ್ಳದೆ ಹೋಗಿದ್ದರೆ. ಪಾಕಿಸ್ತಾನ ಕೊನೆಯ ಟೆಸ್ಟ್ ಗೆಲ್ಲದೇ ಹೋಗಿದ್ದರೆ ಇಲ್ಲಿ ಬೇರೆಯದೇ ಆದ ರ್ಯಾಂಕಿಂಗ್ ಲೆಕ್ಕಾಚಾರವನ್ನು ಕಾಣಬಹುದಿತ್ತು ಎಂದು ವಿರಾಟ್ ಹೇಳಿದ್ದಾರೆ.
ಅಂಕಪಟ್ಟಿಯಲ್ಲಿ ಭಾರತ ಪಾಕಿಸ್ತಾನ ಬಹಳ ಹತ್ತಿದವಿದ್ದವು. ಆದರೆ ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಬೇರೆ ತಂಡಗಳು ನಮಗಿಂತ ಹೆಚ್ಚಿನ ಪಂದ್ಯಗಳನ್ನಾಡಿವೆ. ಅಗ್ರಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು. ಹೀಗಾಗಿ ಇದು ಆಗಾಗ ಬದಲಾಗುತ್ತಲೇ ಇರುತ್ತದೆ. ಹೀಗಾಗಿ ಬರಿ ರ್ಯಾಂಕಿಂಗ್ ಗೋಸ್ಕರ್ ಆಡದೇ, ವಿಶ್ವದ ಅತ್ಯುನ್ನತ ತಂಡವಾಗಿ ರೂಪುಗೊಳ್ಳುವತ್ತ ನಮ್ಮ ಯೋಜನೆ ಸಾಗಬೇಕು ಎಂದು ಹೇಳಿದ್ದಾರೆ.
ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧದ ಸರಣಿ ಸೋಲಿನೊಂದಿಗೆ ನಂಬರ್ 1 ಪಟ್ಟ ಕಳೆದುಕೊಂಡಿತು. ಇದರೊಂದಿಗೆ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಂಬರ್ 1 ಪಟ್ಟ ಅಲಂಕರಿಸಿತ್ತು. ಈ ನಂಬರ್ 1 ಪಟ್ಟವನ್ನು ಉಳಿಸಿಕೊಳ್ಳಲು ಭಾರತ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯವನ್ನು ಗೆಲ್ಲಬೇಕಿತ್ತು. ಆದರೆ ಮಳೆಯಿಂದಾಗಿ ಸತತ ನಾಲ್ಕು ದಿನದಾಟದ ರದ್ದಾಗಿದ್ದರಿಂದ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಹೀಗಾಗಿ ಭಾರತ 110 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದು, ನೆರೆಯ ರಾಷ್ಟ್ರ ಪಾಕಿಸ್ತಾನ 111 (1) ಅಂಕದೊಂದಿಗೆ ಅಗ್ರಸ್ಥಾನ ಅಲಂಕರಿಸಿತು.