ಕ್ರಿಕೆಟ್

ನಾನು ಎದುರಿಸಿದ ಶ್ರೇಷ್ಠ ವೇಗದ ಬೌಲರ್ ಮೆಗ್ರಾತ್: ದ್ರಾವಿಡ್

Vishwanath S
ಮುಂಬೈ: ನನ್ನ ಕ್ರಿಕೆಟ್ ಬದುಕಿನಲ್ಲಿ ನಾನು ಎದುರಿಸಿದ ವೇಗದ ಬೌಲರ್ ಎಂದರೇ ಅವರು ಆಸ್ಟ್ರೇಲಿಯಾದ ಗ್ಲೇನ್ ಮೆಗ್ರಾತ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹೇಳಿದ್ದಾರೆ. 
ನನ್ನ ಪೀಳಿಗೆಯಲ್ಲಿ ನಾನು ಕಂಡ ಉತ್ತಮ ತಂಡ ಆಸ್ಟ್ರೇಲಿಯಾವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಹಾಡಿದ್ದೇನೆ ಆ ಪೈಕಿ ವೇಗದ ಬೌಲಿಂಗ್ ಗೆ ಹೆಸರುವಾಸಿಯಾಗಿದ್ದ ಗ್ಲೇನ್ ಮೆಗ್ರಾತ್ ಅವರ ಚೆಂಡನ್ನು ಎದುರಿಸಿದ್ದು ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ. 
ಗ್ಲೇನ್ ಮೆಗ್ರಾತ್ ನಿಜಕ್ಕೂ ಅದ್ಭುತ ಪ್ರತಿಭೆ. ನಾನು ಆಡುವಾಗ ಯಾವ ರೀತಿ ಯೋಚಿಸುತ್ತೇನೆ ಎಂಬುದನ್ನು ಮೆಗ್ರಾತ್ ನಿಜಕ್ಕೂ ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ನನ್ನನ್ನು ಹೆಚ್ಚು ಬಾರಿ ಬೌಲ್ಡ್ ಮಾಡಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.
SCROLL FOR NEXT