ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿ ಮತ್ತು ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ) 
ಕ್ರಿಕೆಟ್

4ನೇ ಟೆಸ್ಟ್: ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್, ತನ್ನ ಮೊದಲ ಪಂದ್ಯದಲ್ಲೇ ಜೆನ್ನಿಂಗ್ಸ್ ಆಕರ್ಷಕ ಶತಕ!

4ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಆರಂಭಿಕ ಹಿನ್ನಡೆಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಂಗ್ಲರು ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ.

ಮುಂಬೈ: 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಆರಂಭಿಕ ಹಿನ್ನಡೆಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಂಗ್ಲರು ಉತ್ತಮ  ಬ್ಯಾಟಿಂಗ್ ನಡೆಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕುಕ್ ಮತ್ತು ಜೆನ್ನಿಂಗ್ಸ್ ಇಂಗ್ಲೆಂಡ್ ತಂಡಕ್ಕೆ  ಉತ್ತಮ ಅಡಿಪಾಯ ಹಾಕಿದರು. ಈ ಪೈಕಿ ಕುಕ್ 46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾಗ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರೆ, ಮೊತ್ತೊಂದು ತುದಿಯಲ್ಲಿ ಜೆನ್ನಿಂಗ್ಸ್ ಜೊತೆಗೂಡಿದ ಜೋರೂಟ್ 21 ರನ್ ಗಳಿಸಿ ಔಟ್  ಆದರು. ಬಳಿಕ ಅಲಿ ಜೊತೆಗೂಡಿದ ಜೆನ್ನಿಂಗ್ಸ್ ಉತ್ತಮ ಬ್ಯಾಟಿಂಗ್ ಮೂಲಕ ಆಕರ್ಷಕ ಶತಕ ಸಿಡಿಸಿದರು. ಈ ಹಂತದಲ್ಲಿ ದಾಳಿಗಿಳಿದ ಅಶ್ವಿನ್ ಅರ್ಧಶತಕ ಗಳಿಸಿದ್ದ ಅಲಿ ಅವರನ್ನು ಔಟ್ ಮಾಡಿದರು.

ಬಳಿಕ ಅದೇ ಓವರ್ ನಲ್ಲಿ ಜೆನ್ನಿಂಗ್ಸ್ ರನ್ನು ಕೂಡ ಔಟ್ ಮಾಡುವ ಮೂಲಕ ಅಶ್ವಿನ್ ಭಾರತಕ್ಕೆ ಮೇಲುಗೈ ಸಾಧಿಸಿಕೊಟ್ಟರು. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದು, ಬೇರ್ ಸ್ಟೋವ್  (5ರನ್) ಮತ್ತು ಸ್ಟೋಕ್ಸ್ (01) ಕ್ರೀಸ್ ಕಾಯ್ದುಕೊಂಡಿದ್ದು, ಮೊದಲ ದಿನದಾಟ ಅಂತ್ಯಗೊಳ್ಳಲು ಇನ್ನೂ 15 ಓವರ್ ಗಳ ಆಟ ಬಾಕಿ ಇದೆ.

ಭಾರತದ ಪರ ಆರ್ ಅಶ್ವಿನ್ 3 ವಿಕೆಟ್ ಕಬಳಿಸಿ ದಿನದ ಯಶಸ್ವೀ ಬೌಲರ್ ಎನಿಸಿಕೊಂಡರೆ, ಜಡೇಜಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

ಇಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಟೆವೊಲ್ಡೆ Air India ನೂತನ CEO!

KAS ಪರೀಕ್ಷೆಯಲ್ಲೂ ಅಕ್ರಮ: 25 ಮಾರ್ಕ್ಸ್‌ಗೆ ₹1.5 ಕೋಟಿ ಡಿಮ್ಯಾಂಡ್; ಲಂಚ ಕೊಟ್ಟ ಅಭ್ಯರ್ಥಿ ಹೆಸರು ಸಮೇತ ದೂರು!

ಸಿಜೆಪಿ ಪ್ರತಿಭಟನೆ ವೇಳೆ ಜಂತರ್ ಮಂತರ್ ನಲ್ಲಿ ಉಗ್ರ ದಾಳಿಗೆ ಪಾಕ್ ಪ್ರಯತ್ನ: ISI ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್‌ ಭೇದಿಸಿ ಪಂಜಾಬ್ ಪೊಲೀಸ್!

Pak ಆಟಗಾರನ ಬೆನ್ನಲ್ಲೇ ಬಾಂಗ್ಲಾದೇಶದ ಬೌಲರ್ ಖರೀದಿಸಿದ Kavya Maran ಒಡೆತನದ ಸನ್‌ರೈಸರ್ಸ್, ಅಭಿಮಾನಿಗಳ ಆಕ್ರೋಶ!