ಮುಂಬೈ: ಟೀಂ ಇಂಡಿಯಾ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, 83 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮುಂಬೈ ಆಟಗಾರನಿಲ್ಲದೇ ಟೀಂ ಇಂಡಿಯಾ ಕಣಕ್ಕಿಳಿಯುತ್ತಿರುವುದು.
83 ವರ್ಷಗಳ ಇತಿಹಾಸ ಹೊಂದಿರುವ ಮುಂಬೈ ಟೆಸ್ಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರರ್ಯಾರೂ ಆಡದೇ ಇರುವುದು ಇದೇ ಮೊದಲು. ಈ ಬಾರಿ ಮುಂಬೈನವರೇ ಆದ ಅಜಿಂಕ್ಯ ರಹಾನೆ ಗಾಯಾಳುವಾಗಿ ಹೊರಗುಳಿಯದೇ ಇದ್ದರೆ ಈ ಟೆಸ್ಟ್ ಹೀಗೆ ಸುದ್ದಿಯಾಗುತ್ತಿರಲಿಲ್ಲ. ಮುಂಬೈ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಬದಲು ತಂಡದಲ್ಲಿ ಸ್ಥಾನಪಡೆದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿಲ್ಲ.
ಟೀಂ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದೆ.