ಮುಂಬೈ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆಯುವ ಮೂಲಕ 23ನೇ ಬಾರಿಗೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಭಾರತದ ಮಾಜಿ ವೇಗಿ ಕಪಿಲ್ ದೇವ್ ಅವರ ಸಾಧನೆಯನ್ನು ಸಮಗಟ್ಟಿದ್ದಾರೆ. ಈ ಸಾಧನೆ ಮಾಡಲು ಕಪಿಲ್ ದೇವ್ 131 ಪಂದ್ಯಗಳನ್ನು ತೆಗೆದುಕೊಂಡಿದ್ದರೇ ಆರ್ ಅಶ್ವಿನ್ ಕೇವಲ 43 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
ಅತೀ ಹೆಚ್ಚು ಬಾರಿ ಸರಿಣಿಯೊಂದರಲ್ಲಿ 5 ವಿಕೆಟ್ ಪಡೆದಿರುವ ಭಾರತೀಯರಲ್ಲಿ ಅಗ್ರಸ್ಥಾನದಲ್ಲಿರುವುದು ಅನಿಲ್ ಕುಂಬ್ಳೆ ಅವರು 35 ಬಾರಿ ಈ ಸಾಧನೆ ಮಾಡಿದ್ದಾರೆ.