ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಕನಸಿನ ವಿಶ್ವದ ಅತಿದೊಡ್ಡ ಕ್ರೀಡಾಂಗಣ ನಿರ್ಮಿಸುವ ಯೋಜನೆಗೆ ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ) ಚಾಲನೆ ನೀಡಿದೆ.
ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಮರುನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಮುಂಬೈ ಮೂಲದ ಲಾರ್ಸನ್ ಅಂಡ್ ಟರ್ಬೋ(ಎಲ್ ಅಂಡ್ ಟಿ)ಕಂಪನಿ ಕಾಮಗಾರಿ ಗುತ್ತಿಗೆಯನ್ನು ವಹಿಸಿಕೊಂಡಿದೆ.
ಕ್ರೀಡಾಂಗಣ ಜಾಗವನ್ನು ಈಗಾಗಲೇ ನಿರ್ಮಾಣ ಸಂಸ್ಥೆಗೆ ಒಪ್ಪಿಲಾಗಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಎಲ್ಲ ಸೌಕರ್ಯಗಳನ್ನು ಕ್ರೀಡಾಂಗಣ ಹೊಂದಿರಲಿದೆ. 2 ವರ್ಷಗಳಲ್ಲಿ ಕ್ರೀಡಾಂಗಣ ಸಿದ್ಧಗೊಳ್ಳುವ ನಿರೀಕ್ಷೆ ಇದೆ ಎಂದು ಜಿಸಿಎ ತಿಳಿಸಿದೆ.