ಕ್ರಿಕೆಟ್

ಕರುಣ್ ನಾಯರ್ ತ್ರಿಶತಕ ಐತಿಹಾಸಿಕ ಸಾಧನೆಗೆ ಬೆನ್ನೆಲುಬಾಗಿ ನಿಂತ ವಿರಾಟ್ ಕೊಹ್ಲಿ

Vishwanath S

ಮುಂಬೈ: ಕನ್ನಡಿಗ ಕರುಣ್ ನಾಯರ್ ಅವರು ತ್ರಿಶತಕ ಪೂರೈಸುವ ತನಕ ಪಂದ್ಯವನ್ನು ಡಿಕ್ಲೇರ್ ಮಾಡಿಕೊಳ್ಳದೇ ಯುವ ಆಟಗಾರನ ಐತಿಹಾಸಿಕ ಸಾಧನೆಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬೆನ್ನೆಲುಬಾಗಿ ನಿಂತು ಮಾದರಿ ನಾಯಕ ಎಂದು ಎನಿಸಿಕೊಂಡಿದ್ದಾರೆ.

ಚೆನ್ನೈನ ಚಿಪಾಕ್ ನಲ್ಲಿರುವ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತ್ರಿಶತಕ ಸಿಡಿಸಿ ಸಂಭ್ರಮಿಸಿದರು. ಇದರ ಹಿಂದೆ ಸ್ಫೂರ್ತಿಯ ಸೆಲೆಯಾಗಿ ನಿಂತದ್ದು ನಾಯಕ ವಿರಾಟ್ ಕೊಹ್ಲಿ. ಕರುಣ್ ದ್ವಿಶತಕ ಸಿಡಿಸುತ್ತಿದ್ದಂತೆ ವೇಗದ ಆಟಕ್ಕೆ ಮೊರೆ ಹೋದರು ಇದು ಅವರು ತ್ರಿಶತಕ ಸಿಡಿಸಲು ಕಾರಣವಾಯಿತು. ಕರುಣ್ ನಾಯರ್ ಅವರ ವೇಗ ಬ್ಯಾಟಿಂಗ್ ನೋಡಿದ ವಿರಾಟ್ ಕೊಹ್ಲಿ ಪಂದ್ಯವನ್ನು ಡಿಕ್ಲೇರ್ ಮಾಡಿಕೊಳ್ಳದೇ ಕರುಣ್ ನಾಯರ್ ಅವರ ಐತಿಹಾಸಿಕ ಸಾಧನೆಗಾಗಿ ಕಾದುಕುಳಿತರು.

ಇನ್ನೇನು 4ನೇ ದಿನದಾಟದಂತ್ಯಕ್ಕೆ ಕೇವಲ 8 ಓವರ್ ಗಳು ಇರುವಂತೆ ಕರುಣ್ ನಾಯರ್ ಬೌಂಡರಿ ಸಿಡಿಸುವ ಮೂಲಕ ತ್ರಿಶತಕವನ್ನು ಪೂರೈಸಿದರು. ಕರುಣ್ ನಾಯರ್ ತ್ರಿಶತಕ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಪಂದ್ಯವನ್ನು ಡ್ಲಿಕೇರ್ ಮಾಡಿಕೊಂಡು ಇಂಗ್ಲೆಂಡ್ ಗೆ ಎರಡನೇ ಇನ್ನಿಂಗ್ಸ್ ಆಡಲು ಅನುವು ಮಾಡಿಕೊಟ್ಟರು.

SCROLL FOR NEXT