ನವದೆಹಲಿ: ಟೀಂ ಇಂಡಿಯಾ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ತಂದೆಯಾಗಿದ್ದು, ಇರ್ಫಾನ್ ಪತ್ನಿ ಸಫಾ ಬೇಗ್ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಚಾರವನ್ನು ಸ್ವತಃ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದು, ಪ್ರಸ್ತುತ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ನನ್ನ ಸಂತೋಷವನ್ನು ಹೇಗೆ ಹಂಚಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ನಾನು ಗಂಡು ಮಗುವಿಗೆ ತಂದೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಇರ್ಫಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅವರ ಸಹೋದರ ಯೂಸುಫ್ ಪಠಾಣ್, ತಮ್ಮನಿಗೆ ಶುಭಾಶಯ ಕೋರಿದ್ದಾರೆ. ಪಠಾಣ್ ಕುಟುಂಬಕ್ಕೆ ಮತ್ತೋರ್ವ ಪಠಾಣ್ ನ ಆಗಮನವಾಗುತ್ತಿದ್ದು, ಆತನನ್ನು ಬರಮಾಡಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ನನ್ನ ಮಕ್ಕಳಾದ ಅಯಾನ್ ಮತ್ತು ರಯಾನ್ ಪುಟ್ಟ ತಮ್ಮನನ್ನು ಪಡೆದ ಖುಷಿಯಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಜೆಡ್ಡಾದ ರೂಪದರ್ಶಿ ಸಫಾ ಬೇಗ್ ರನ್ನು ಇರ್ಫಾನ್ ಪಠಾಣ್ ಮೆಕ್ಕಾದಲ್ಲಿ ವಿವಾಹವಾಗಿದ್ದರು.
Is ehsas ko Bayaan karna Mushkil hai...is me Ek behtareen si Kashish hay, blessed with a baby boy