ಮುಂಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ತನ್ನ ಅತಿದೀರ್ಘ ಸತತ ಗೆಲುವಿನ ದಾಖಲೆ ಮಾಡಿದೆ.
2015ರಲ್ಲಿ ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಸೋಲಿನ ಬಳಿಕ ಭಾರತ ಆಡಿದ ಸತತ 18 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇದಕ್ಕೂ ಮುನ್ನ 1985ರ ಸೆಪ್ಟೆಂಬರ್ ನಿಂದ 1987ರ ಮಾರ್ಚ್ ವರೆಗೆ ಆಡಿದ 17 ಟೆಸ್ಟ್ ಪಂದ್ಯಗಳಲ್ಲಿ ಅಜೇಯವಾಗಿ ಉಳಿದ್ದಿದ್ದು ದಾಖಲೆ ಆಗಿತ್ತು. ಆದರೆ ಅಂದು ಕೇವಲ 4 ಟೆಸ್ಟ್ ನಲ್ಲಿ ಭಾರತ ಗೆದ್ದಿದ್ದರೆ ಈ ಬಾರಿ 14 ಪಂದ್ಯಗಳಲ್ಲಿ ಜಯ ದಾಖಲಿಸಿದೆ.
ಇನ್ನು ಅತಿದೀರ್ಘ ಸತತ ಗೆಲುವಿನ ದಾಖಲೆ ವೆಸ್ಟ್ ಇಂಡೀಸ್ ಹೆಸರಲ್ಲಿದೆ. ವಿಂಡೀಸ್ ಸತತ 27 ಪಂದ್ಯಗಲ್ಲಿ ಅಜೇಯವಾಗಿ ಉಳಿದಿದ್ದು ಈವರೆಗೂ ವಿಶ್ವದಾಖಲೆಯಾಗಿ ಉಳಿದುಕೊಂಡಿದೆ.