ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಧೋನಿ, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ದ್ರಾವಿಡ್, ಕುಂಬ್ಳೆ 
ಕ್ರಿಕೆಟ್

ಕುಂಬ್ಳೆ ಮಾರ್ಗಸೂಚಿಗಳು ರೆಡಿ; ಬಿಸಿಸಿಐ ಒಪ್ಪಿಗೆಯೊಂದೇ ಬಾಕಿ

ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡು ಒಂದು ವಾರಗಳಷ್ಟೇ ಕಳೆದಿವೆ.

ಚೆನ್ನೈ: ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡು ಒಂದು ವಾರಗಳಷ್ಟೇ ಕಳೆದಿವೆ. ಆದರೆ ತರಬೇತಿಗೆ ಸಂಬಂಧಿಸಿದ ಕೆಲಸಗಳು ನಿರೀಕ್ಷೆಗಿಂತ ವೇಗಗತಿಯಲ್ಲಿ ಸಾಗುತ್ತಿದೆ.

ಟೆಸ್ಟ್ ಸರಣಿಗಾಗಿ ವಿಂಡೀಸ್ ಪ್ರವಾಸಕ್ಕೂ ಬೆಂಗಳೂರಿನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದು, ಅಭ್ಯಾಸದ ನಡುವೆಯೇ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ನ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್, ಅಂಡರ್ 19 ಕೋಚ್ ರಾಹುಲ್ ದ್ರಾವಿಡ್, ಕಿರಿಯ ಆಟಗರಾರರ ಆಯ್ಕೆ ಸಮಿತಿ ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಸೇರಿದಂತೆ ಬಿಸಿಸಿಐ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಭಾರತ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರ ಬಗ್ಗೆ ಕುಂಬ್ಳೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ರಾಹುಲ್ ದ್ರಾವಿಡ್ ಹಾಗೂ ಕುಂಬ್ಳೆ ಇಬ್ಬರು ಭಾರತ ಎ ಕ್ರಿಕೆಟ್ ತಂಡ ಹಾಗೂ ಹಿರಿಯರ ಆಟಗಾರರ ನಡುವೆ ಬಲವಾದ ಸಂಪರ್ಕದ ಪರವಾಗಿ ಮಾತನಾಡಿದ್ದಾರೆ. ಹಿರಿಯರು ಹಾಗೂ ಕ್ರಿಕೆಟ್ ತಂಡದ ಆಟಗಾರರ ನಡುವೆ ಉತ್ತಮ ಸಂಪರ್ಕಕ್ಕಾಗಿಯೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳು ವ್ಯವಸ್ಥೆಯನ್ನು ಹೊಂದಿವೆ. ರಾಹುಲ್ ದ್ರಾವಿಡ್ ಸಹ ಇದೆ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂಬ ಅಭಿಪ್ರಾಯವನ್ನು ಒಂದು ವರ್ಷದಿಂದ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವೂ ಚರ್ಚೆಯಲ್ಲಿ ನಡೆದ ಪ್ರಕಾರವೇ ನಡೆದರೆ ಹಿರಿಯ ಆಟಗಾರರಿಗೆ ತರಬೇತುದಾರರಾಗಿರುವ ಅನಿಲ್ ಕುಂಬ್ಳೆ, ಅಂಡರ್ 19 ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಆದರೆ ಕುಂಬ್ಳೆ ಭಾರತೀಯ ಕ್ರಿಕೆಟ್ ತಂಡದ ತರಬೇತಿಗಾಗಿ ಸಿದ್ಧಪಡಿಸಿರುವ ಸಮಗ್ರ ಮಾರ್ಗಸೂಚಿಗಳ ಜಾರಿಗೆ ಬಿಸಿಸಿಐ ಅನುಮತಿ ನೀಡಬೇಕಿದ್ದು, ಕುಂಬ್ಳೆ ಸಿದ್ಧಪಡಿಸಿರುವ ಮಾರ್ಗಸೂಚಿಗಳು ಬಿಸಿಸಿಐ ಅನುಮತಿಗಾಗಿ ಕಾಯುತ್ತಿವೆ. ಕುಂಬ್ಳೆ ಸಿದ್ಧಪಡಿಸಿರ್ವ ಮಾರ್ಗಸೂಚಿಗಳು ಸೆಪ್ಟೆಂಬರ್ ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೂಕ್ತ  ಯೋಜನೆ ರೂಪಿಸಿದ ನಂತರ ಜು.3 ರಂದು ಬೆಂಗಳೂರಿನಲ್ಲಿ ದ್ರಾವಿಡ್, ಕೊಹ್ಲಿ, ಧೋನಿ, ವೆಂಕಟೇಶ್ ಪ್ರಸಾದ್, ಸಂದೀಪ್ ಪಾಟೀಲ್ ಅವರೊಂದಿಗೆ ಕುಂಬ್ಳೆ ನಡೆಸಿದ ಸಭೆಯ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್