ನವದೆಹಲಿ: ಸೌರವ್ ಗಂಗೂಲಿ ಭಾರತ ಕ್ರಿಕೆಟ್ ನ ಸರ್ವಶ್ರೇಷ್ಠ ನಾಯಕ ಎಂದು ಟ್ವೀಟ್ ಮಾಡಿದ್ದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಎಂಎಸ್ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗುರುವಾರ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ಅವರ ಹುಟ್ಟುಹಬ್ಬ. ಶುಕ್ರವಾರ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹುಟ್ಟುಹಬ್ಬವಾಗಿತ್ತು. ಇದರಿಂದಾಗಿ ಇಬ್ಬರು ದಿಗ್ಗಜರಿಗೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿತ್ತು. ಈ ಮಧ್ಯೆ ಹರ್ಭಜನ್ ಸಿಂಗ್ ಸೌರವ್ ಗಂಗೂಲಿ ಸರ್ವಶ್ರೇಷ್ಠ ನಾಯಕ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಧೋನಿ ಅಭಿಮಾನಿಗಳು ಹರ್ಭಜನ್ ಸಿಂಗ್ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು.
ಗ್ರೆಗ್ ಚಾಪೆಲ್ ಟೀಂ ಇಂಡಿಯಾದ ಕೋಚ್ ಆಗಿದ್ದಾಗ ಗಂಗೂಲಿ ತಂಡದಿಂದ ಹೊರಬೀಳಬೇಕಾಯಿತು ಈ ಸಂದರ್ಭದಲ್ಲೂ ಹರ್ಭಜನ್ ಸಿಂಗ್ ಗಂಗೂಲಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು.