ನವದೆಹಲಿ: ಅಪಘಾತವೊಂದರಲ್ಲಿ ಸಂಭವಿಸಿದ್ದ ಪ್ರೇಯಸಿಯ ಸಾವು ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿಗೆ ವಿರಾಮ ಹಾಕಿತ್ತು ಎಂಬ ಸಂಗತಿ ಧೋನಿ ಜೀವನಾಧಾರಿತ ಚಿತ್ರದಲ್ಲಿ ಇರಲಿದೆಯಂತೆ.
ಹೌದು, ಧೋನಿ ಜೀವನದಲ್ಲೊಂದು ದುರಂತ ಪ್ರೇಕಕಥೆ ನಡೆದು ಹೋಗಿತ್ತು. ಆ ಪ್ರೇಯಸಿಯ ಸಾವು ಧೋನಿ ಖಿನ್ನತೆಯಿಂದ ಬಳಲುವಂತೆ ಮಾಡಿತ್ತು. ಅಷ್ಟೇ ಅಲ್ಲದೆ ಒಂದು ವರ್ಷಗಳ ಕಾಲ ಪೂರ್ಣ ಮೌನಕ್ಕೆ ಶರಣಾಗಿ, ಜೀವನಕ್ಕಿಂತ ಹೆಚ್ಚಾಗಿದ್ದ ಕ್ರಿಕೆಟ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದರಂತೆ. ಇಂತ ರಹಸ್ಯ ಸಂಗತಿ ಇದೀಗ ಧೋನಿ ಜೀವನಾಧಾರಿತ ಚಿತ್ರದಲ್ಲಿ ನಿರ್ದೇಶಕರು ತೆರೆದಿಡಲಿದ್ದಾರೆ.
ಒಂದು ವರ್ಷಗಳ ಕಾಲ ನೋವು ವೇದನೆಯಿಂದ ಮೌನವಾಗಿದ್ದ ಧೋನಿ ಮುಂದೆ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ಮತ್ತೆ ಕ್ರಿಕೆಟ್ ಕಡೆ ಗಮನ ಹರಿಸುತ್ತಾರೆ. ಈ ಮಧ್ಯೆ ಸಾಕ್ಷಿ ಎಂಬುವರ ಪರಿಚಯವಾಗುತ್ತದೆ. ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ನವೋಲ್ಲಾಸದೊಂದಿಗೆ ಪುಟಿದೇಳುವ ಧೋನಿ ಕ್ರಿಕೆಟ್ ನಲ್ಲಿ ಯಶಸ್ಸು ಕಾಣುತ್ತಾರೆ. ಅವರ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಿದೆ.
ಇಂತಹ ರಹಸ್ಯ ಸಂಗತಿಯನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ನಿರ್ದೇಶಕರು ಧೋನಿಯನ್ನು ಕೇಳಿದಾಗ ಬೇಡ ಎಂದಿದ್ದರಂತೆ ಆದರೆ ಪಟ್ಟು ಬಿಡದ ನಿರ್ದೇಶಕರು ಧೋನಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics