ಅನಿಲ್ ಕುಂಬ್ಳೆ 
ಕ್ರಿಕೆಟ್

ತಂಡದ ಬಸ್‌ಗೆ ತಡವಾಗಿ ಬಂದ ಆಟಗಾರರಿಗೆ 50 ಡಾಲರ್ ದಂಡ: ಅನಿಲ್ ಕುಂಬ್ಳೆ

ಟೀಂ ಇಂಡಿಯಾ ತಂಡದಲ್ಲಿ ಕೆಲ ಬದಲಾವಣೆಗಳಿಗೆ ಮುಂದಾಗಿರುವ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಆಟಗಾರರಿಗೆ ಶಿಸ್ತಿನ ಪಾಠ ಹೇಳಲು...

ಮುಂಬೈ: ಟೀಂ ಇಂಡಿಯಾ ತಂಡದಲ್ಲಿ ಕೆಲ ಬದಲಾವಣೆಗಳಿಗೆ ಮುಂದಾಗಿರುವ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಆಟಗಾರರಿಗೆ ಶಿಸ್ತಿನ ಪಾಠ ಹೇಳಲು ತೀರ್ಮಾನಿಸಿದ್ದು, ತಂಡದ ಬಸ್ ಗೆ ತಡವಾಗಿ ಬರುವವರು 50 ಡಾಲರ್ ದಂಡ ಪಾವತಿಸಬೇಕು ಎಂದು ಸೂಚಿಸಿದ್ದಾರೆ.

ಇನ್ನು ನಾಲ್ಕು ದಿನಗಳಿಗೊಮ್ಮೆ ಸಭೆ ನಡೆಯಲಿದ್ದು, ತಂಡದ ಯಾವುದೇ ಆಟಗಾರ ನನ್ನೊಂದಿಗೆ ಮಾತುಕತೆ ನಡೆಸಲು ಯಾವಾಗ ಬೇಕಾದರೂ ಬರಬಹುದು ಎಂದು ಆಟಗಾರರಿಗೆ ಸೂಚಿಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಯುವ ಆಟಗಾರರನ್ನೇ ಹೊಂದಿರುವ ಭಾರತ ತಂಡಕ್ಕೆ ಕುಂಬ್ಳೆ ತಮ್ಮ ಮೊದಲ ಸಭೆಯಲ್ಲೇ ಶಿಸ್ತಿನ ಪಾಠ ಹೇಳಿದ್ದಾರೆ. ಕುಂಬ್ಳೆ ಶಿಸ್ತಿನ ಪಾಠ ಹೇಳುವ ಜತೆಯಲ್ಲೇ ಪ್ರತಿಯೊಬ್ಬ ಆಟಗಾರರಿಗೂ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!