ಕ್ರಿಕೆಟ್

ಮೊದಲ ಹಗಲು-ರಾತ್ರಿ ಟೆಸ್ಟ್ ಪ೦ದ್ಯ​ಕ್ಕೆ ಸಾಕ್ಷಿಯಾಗಲಿರುವ ಈಡನ್‍ ಗಾರ್ಡನ್

Srinivasamurthy VN

ಕೋಲ್ಕತಾ: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಪಶ್ಚಿಮ ಬಂಗಾಳದಲ್ಲಿರುವ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜನೆ ಗೊಂಡಿದ್ದು, ಈ ಐತಿಹಾಸಿಕ ಅಹರ್ನಿಶಿ ಪಂದ್ಯಕ್ಕೆ  ಈಡನ್ ಗಾರ್ಡನ್ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದೆ. ನ್ಯೂಜಿಲೆ೦ಡ್ ವಿರುದ್ಧ ಮು೦ಬರುವ ಟೆಸ್ಟ್ ಸರಣಿಯ ವೇಳೆಯ ಅಹನಿ೯ಶಿ ಟೆಸ್ಟ್ ಪ೦ದ್ಯವಾಡುವ ಉತ್ಸಾಹ ತೋರಿರುವ ಭಾರತ  ತ೦ಡ ಅದಕ್ಕಾಗಿ ಭಜ೯ರಿ ಸಿದ್ಧತೆ ನಡೆಸುತ್ತಿದೆ.

ಭಾರತದ ಮೊತ್ತಮೊದಲ ಹಗಲು-ರಾತ್ರಿ ಟೆಸ್ಟ್ ಪ೦ದ್ಯ ಜೂನ್ 17 ರಿ೦ದ 20ರವರೆಗೆ ಕೋಲ್ಕತದ ಈಡನ್ ಗಾಡ೯ನ್ ನಲ್ಲಿ ನಡೆಯಲಿದೆ. ಹೀಗಾಗಿ ಕ್ರೀಡಾಂಗಣವನ್ನು ಸಕಲ ರೀತಿಯಲ್ಲೂ  ಸಜ್ಜುಗೊಳಿಸುತ್ತಿರುವ ಸೌರವ್ ಗಂಗೂಲಿ ನೇತೃತ್ವದ ಫಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ, ಬ೦ಗಾಳದ ಸ್ಥಳೀಯ ಟೂನಿ೯ ಸೂಪರ್ ಲೀಗ್‍ನ ಫೈನಲ್ ಪ೦ದ್ಯ ಅಹನಿ೯ಶಿಯಾಗಿ ನಡೆಸಲು  ಮುಂದಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಬ೦ಗಾಳ ಕ್ರಿಕೆಟ್ ಸ೦ಸ್ಥೆ ಅಧ್ಯಕ್ಷ ಸೌರವ್ ಗ೦ಗೂಲಿ ಮಾಹಿತಿ ನೀಡಿದ್ದು, ಭಾರತದಲ್ಲಿ ಬಳಸಲಾಗುವ ಎಸ್‍ಜಿ ಚೆ೦ಡುಗಳ ಬದಲು, ಗುಲಾಬಿ ಬಣ್ಣದ  ಕುಕಾಬುರಾ ಚೆ೦ಡನ್ನು ಪ೦ದ್ಯಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸೌರವ್ ಗ೦ಗೂಲಿ ನೇತೃತ್ವದ ಬಿಸಿಸಿಐ ತಾ೦ತ್ರಿಕ ಸಮಿತಿ, ದುಲೀಪ್ ಟ್ರೋಫಿ ಟೂನಿ೯ಯ ಪ೦ದ್ಯಗಳನ್ನು ಅಹನಿ೯ಶಿಯಾಗಿ ಆಡುವ ಬಗ್ಗೆ ತೀಮಾ೯ನಿಸಿದೆ.

SCROLL FOR NEXT