ಕ್ರಿಕೆಟ್

ಜಿಂಬಾಂಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್ ಗಳ ಜಯ

Srinivas Rao BV

ಹರಾರೆ: ಮೊದಲ ಪಂದ್ಯದಲ್ಲೇ ಕರ್ನಾಟಕ ಮೂಲದ ಭಾರತ ಕ್ರಿಕೆಟ್ ತಂಡದ ಆಟಗಾರ ಲೋಕೇಶ್ ರಾಹುಲ್ ಸಿಡಿಸಿದ ಶತಕದ ನೆರವಿನಿಂದ ಜಿಂಬಾಬ್ವೆ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಜಯ ಗಳಿಸಿದೆ.

ಜಿಂಬಾಬ್ವೆ ತಂಡ ನೀಡಿದ 168 ಮೊತ್ತದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ಲೋಕೇಶ್ ರಾಹುಲ್ ಸಿಡಿಸಿದ ಶತಕ ಹಾಗೂ ಅಂಬಟಿ ರಾಯ್ಡು ಪೇರಿಸಿದ 88 ರನ್ ಗಳ ಮೂಲಕ ಜಿಂಬಾಂಬ್ವೆ ವಿರುದ್ಧ ಸುಲಭ ಜಯ ದಾಖಲಿಸಿ ಮೊದಲ ಪಂದ್ಯವನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಫೀಲ್ಡೀಂಗ್ ಆಯ್ದುಕೊಂಡ ಭಾರತ ತಂಡ ಪರ 4 ವಿಕೆಟ್ ಪಡೆದ ಬೌಲರ್ ಬೂಮ್ರಾ ಬೌಲಿಂಗ್ ದಾಳಿ ನೆರವಿನಿಂದ ಜಿಂಬಾಂಬ್ವೆ ತಂಡವನ್ನು 168 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು.

ಬೂಮ್ರಾ 28 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಧವಳ್ ಕುಲಕರ್ಣಿ 42 ರನ್ ನೀಡಿ 2 ವಿಕೆಟ್ ಹಾಗೂ ಬರೀಂದರ್ ಸ್ರಾನ್ 42 ರನ್ ನೀಡಿ 2 ಕಬಳಿಸಿ ಜಿಂಬಾಂಬ್ವೆ ಪಾಲಿಗೆ ಮಾರಕವಾದರು. ಆತಿಥೇಯ ತಂಡದ ಪರ ಎಲ್ಟಾನ್ ಚಿಗುಂಬರಾ ಅತಿ ಹೆಚ್ಚು (41 ) ರನ್ ಗಳಿಸಿದರೆ ಸಿಕಂದರ್ ರಾಜಾ 23 ರನ್ ಗಳಿಸಿ ಜಿಂಬಾಂಬ್ವೆ ತಂಡ 150 ರ ಗಡಿ ದಾಟಲು ನೆರವಾದರು, ಭಾರತದ ಪರ ಯುಜಾವೇಂದ್ರ ಚಾಚಾಲ್, ಕೆಎಲ್ ರಾಹುಲ್, ಕರುಣ್ ನಾಯರ್ ಈ ಪಂದ್ಯದ ಮೂಲಕ ಏಕ ದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. 

SCROLL FOR NEXT