ಡ್ರೆಸಿಂಗ್ ರೂಂ ಬಾಲ್ಕನಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಆಟಗಾರರು (ಎಎಫ್ ಪಿ ಚಿತ್ರ) 
ಕ್ರಿಕೆಟ್

ಅಂಪೈರ್ ವಿವಾದಾತ್ಮಕ ತೀರ್ಪಿಗೆ ಲಂಕಾ ತಂಡದ ಧ್ವಜ ಪ್ರತಿಭಟನೆ!

ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ವಿರುದ್ಧ ಶ್ರೀಲಂಕಾ ತಂಡ ಆಟಗಾರರು ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ..

ಲಂಡನ್: ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ವಿರುದ್ಧ ಶ್ರೀಲಂಕಾ ತಂಡ ಆಟಗಾರರು ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ  ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ತಮ್ಮ ರಾಷ್ಟ್ರದ್ವಜವನ್ನು ಹಾರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಈ ಘಟನೆ ನಡೆದಿದ್ದು, ಇಂಗ್ಲೆಂಡ್ ಬ್ಯಾಟ್ಸ್​ಮನ್ ಅಲೆಕ್ಸ್ ಹ್ಯಾಲ್ಸ್ 58 ರನ್ ಗಳಿಸಿ ಆಡುತ್ತಿದ್ದಾಗ ವೇಗಿ ನುವಾನ್ ಪ್ರದೀಪ್ ಎಸೆತದಲ್ಲಿ  ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಆಸ್ಟ್ರೇಲಿಯನ್ ಅಂಪೈರ್ ರಾಡ್ ಟಕರ್ ಅದಾಗಲೇ ಅದನ್ನು ‘ನೋಬಾಲ್’ಎಂದು ಘೋಷಿಸಿದ್ದರು. ಆದರೆ ಟಿವಿ ಮರುಪ್ರಸಾರದಲ್ಲಿ ಪ್ರದೀಪ್ ಕಾಲು ಕ್ರೀಸ್​ ನೊಳಗೇ ಇದ್ದುದು ಸ್ಪಷ್ಟವಾಗಿತ್ತು. ಅಂಪೈರ್ ತೀರ್ಪನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳುವ ಅವಕಾಶ ಲಂಕಾ ತಂಡಕ್ಕೆ ಇರಲಿಲ್ಲ.

ಹೀಗಾಗಿ ಪೆವಿಲಿಯನ್ ನಿಂದಲೇ ಪಂದ್ಯ ವೀಕ್ಷಿಸುತ್ತಿದ್ದ ಲಂಕಾ ತಂಡದ ಇತರೆ ಆಟಗಾರರು ಡ್ರೆಸ್ಸಿಂಗ್ ರೂಮ್ ಬಾಲ್ಕನಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.  ಸುಮಾರು 45 ನಿಮಿಷಗಳ ಬಳಿಕ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದ ಸ್ವಾಮ್ಯ ಹೊಂದಿರುವ ಎಂಸಿಸಿ ಸೂಚನೆಯ ಮೇರೆಗೆ ಲಂಕಾ ತಂಡ ರಾಷ್ಟ್ರಧ್ವಜವನ್ನು ಆಟಗಾರರು ತೆಗೆದರು. ತೀವ್ರ  ಕುತೂಹಲ ಕೆರಳಿಸಿದ್ದ ಈ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತ್ತು.

ಬಳಿಕ ಈ ಬಗ್ಗೆ ಮಾತನಾಡಿದ ಲಂಕಾ ತಂಡದ ಕೋಚ್ ಗ್ರಹಾಂ ಫೋರ್ಡ್,"ಮೈದಾನದಲ್ಲಿ ಹೋರಾಟಯುತ ನಿರ್ವಹಣೆ ತೋರುತ್ತಿದ್ದ ಆಟಗಾರರಿಗೆ ಡ್ರೆಸ್ಸಿಂಗ್ ರೂಮ್ ನಿಂದ ನೈತಿಕ ಬೆಂಬಲ  ತುಂಬುವ ಸಲುವಾಗಿ ನಾವು ರಾಷ್ಟ್ರಧ್ವಜ ಹಾರಿಸಿದೆವು’ ಎಂದು ಹೇಳಿದರು. ಅಲ್ಲದೆ ಈ ಬಗ್ಗೆ ಐಸಿಸಿ ಗಮನ ಹರಿಸಬೇಕು ಮತ್ತು ಲಭ್ಯವಿರುವ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಅವರು  ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!