ಹರಾರೆ: ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಈಗ ಜಿ೦ಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ.
ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಭಾರತದ ಯುವ ವೇಗಿ ಜಸ್ಪ್ರೀಸ್ ಬುಮ್ರಾ (4) ದಾಳಿಗೆ ತತ್ತರಿಸಿದ ಜಿಂಬಾಬ್ವೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 123ರನ್ಗಳಿಸುವ ಮೂಲಕ ಭಾರತಕ್ಕೆ 124 ರನ್ ಗಳ ಅಲ್ಪ ಮೊತ್ತದ ಸವಾಲು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, ಆರಂಭಿಕ ಬ್ಯಾಟ್ಸ್ಮನ್ ಹ್ಯಾಮಿಲ್ಟನ್ ಮಸಕಜ (08) ವಿಕೆಟ್ ಪಡೆಯುವ ಮೂಲಕ ಧವಳ್ ಕುಲಕರ್ಣಿ ಆರಂಭಿಕ ಬ್ರೇಕ್ ನೀಡಿದರು. ಜಿಂಬಾಬ್ವೆ ಪರ ಹುಸಿ ಸಿಂಬಾಂಡ ಗಳಿಸಿದ 38 ರನ್ ವಯಕ್ತಿಕ ಗರಿಷ್ಠ ಮೊತ್ತವಾಗಿದೆ. ಭಾರತೀಯ ಬೌಲರ್ಗಳ ಕರಾರುವಕ್ ಬೌಲಿಂಗ್ ದಾಳಿಗೆ ಜಿಂಬಾಬ್ವೆ ಯಾವ ಆಟಗಾರರು ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಜಿಂಬಾಬ್ವೆ 42.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 123 ರನ್ಗಳಿಸಿತು.
ಭಾರತದ ಪರ ಜಸ್ಪ್ರೀಸ್ ಬುಮ್ರಾ 4 ಹಾಗೂ ಚಾಹಲ್ 2 ವಿಕೆಟ್ ಪಡೆದು ಗಮನ ಸೇಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics