ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು
ಹರಾರೆ: ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಟೀಂ ಇಂಡಿಯಾ ಬುಧವಾರ ಜಿ೦ಬಾಬ್ವೆ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಭಾರತದ ಯುವ ವೇಗಿ ಜಸ್ಪ್ರೀಸ್ ಬುಮ್ರಾ (4) ದಾಳಿಗೆ ತತ್ತರಿಸಿದ ಜಿಂಬಾಬ್ವೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 123ರನ್ಗಳಿಸುವ ಮೂಲಕ ಭಾರತಕ್ಕೆ 124 ರನ್ ಗಳ ಅಲ್ಪ ಮೊತ್ತದ ಸವಾಲು ನೀಡಿತ್ತು.
ಜಿಂಬಾಬ್ವೆ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 21.5 ಓವರ್ ಗಳಲ್ಲಿ 126 ರನ್ ಗಳಿಸುವ ಮೂಲಕ ಮೂರನೇ ಬಾರಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ಹಿಂದೆ 2013ರ ಪ್ರವಾಸದ ಏಕದಿನ ಸರಣಿಯನ್ನು 5-0 ಹಾಗೂ 2015ರ ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದುಕೊ೦ಡಿದೆ. ಈ ಪಂದ್ಯವನ್ನೂ ಗೆಲ್ಲುವ ಮೂಲಕ ಭಾರತ ಸತತ ಹ್ಯಾಟ್ರಿಕ್ ಕ್ಲೀನ್ ಸ್ವೀಪ್ ಮಾಡಿದ ದಾಖಲೆ ಬರೆದಿದೆ.
ಆರಂಭಿಕ ಆಟಗಾರ ಕೆ.ಎಲ್ ರಾಹುಲ್(ಔಟಾಗದೆ 63) ಹಾಗೂ ಫಿಯಾಜ್ ಫಜಲ್(ಔಟಾಗದೆ 55) ಅಜೇಯ ಅರ್ಧಶಕದ ನೆರವಿನಿಂದ ಭಾರತ ಜಿಂಬಾಬ್ವೆ ವಿರುದ್ಧ ಹತ್ತು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, ಆರಂಭಿಕ ಬ್ಯಾಟ್ಸ್ಮನ್ ಹ್ಯಾಮಿಲ್ಟನ್ ಮಸಕಜ (08) ವಿಕೆಟ್ ಪಡೆಯುವ ಮೂಲಕ ಧವಳ್ ಕುಲಕರ್ಣಿ ಆರಂಭಿಕ ಬ್ರೇಕ್ ನೀಡಿದರು. ಜಿಂಬಾಬ್ವೆ ಪರ ಹುಸಿ ಸಿಂಬಾಂಡ ಗಳಿಸಿದ 38 ರನ್ ವಯಕ್ತಿಕ ಗರಿಷ್ಠ ಮೊತ್ತವಾಗಿದೆ. ಭಾರತೀಯ ಬೌಲರ್ಗಳ ಕರಾರುವಕ್ ಬೌಲಿಂಗ್ ದಾಳಿಗೆ ಜಿಂಬಾಬ್ವೆ ಯಾವ ಆಟಗಾರರು ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಜಿಂಬಾಬ್ವೆ 42.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 123 ರನ್ಗಳಿಸಿತು.
ಭಾರತದ ಪರ ಜಸ್ಪ್ರೀಸ್ ಬುಮ್ರಾ 4 ಹಾಗೂ ಚಾಹಲ್ 2 ವಿಕೆಟ್ ಪಡೆದು ಗಮನ ಸೇಳೆದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos