ಕ್ರಿಕೆಟ್

ರಿಕ್ಕಿ ಪಾ೦ಟಿ೦ಗ್ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

Srinivasamurthy VN

ಹರಾರೆ: ಹರಾರೆಯಲ್ಲಿ ಬುಧವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕ್ಕಿ ಪಾಂಟಿಂಗ್ ಅವರ  ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲಿ ಒಟ್ಟು 324 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಧೋನಿ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕ್ಕಿ ಪಾಂಟಿಂಗ್ ಅವರ  ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ ಅತೀ ಹೆಚ್ಚು ಪಂದ್ಯಗಳಲ್ಲಿ ಅಂದರೆ 324 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಖ್ಯಾತಿ ರಿಕ್ಕಿ ಪಾಂಟಿಂಗ್ ಅವರ ಹೆಸರಲ್ಲಿತ್ತು. ಇದೀಗ ಧೋನಿ ಈ  ದಾಖಲೆಯನ್ನು ಸರಿಗಟ್ಟಿದ್ದು, ಇನ್ನೊಂದು ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದರೆ ಅತೀ ಹೆಚ್ಚು ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ ಖ್ಯಾತಿ ಧೋನಿ ಅವರದ್ದಾಗುತ್ತದೆ.

ಧೋನಿ ನಾಯಕತ್ವದಲ್ಲಿ ಭಾರತ ತಂಡ ಇದೇ ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲಿ ಈ ದಾಖಲೆ ಮುರಿಯಲಿದೆ. ಹರಾರೆಯಲ್ಲಿ ನಿನ್ನೆ ನಡೆದ 3ನೇ ಟಿ20 ಪಂದ್ಯ  ಧೋನಿ ನಾಯಕತ್ವದ 324ನೇ ಪಂದ್ಯವಾಗಿದೆ. 2007ರಲ್ಲಿ ನಾಯಕನಾಗಿ ನೇಮಕವಾಗಿದ್ದ ಧೋನಿ 60 ಟೆಸ್ಟ್, 194 ಏಕದಿನ ಹಾಗೂ 70 ಟಿ20 ಪ೦ದ್ಯಗಳಲ್ಲಿ ಭಾರತ ತ೦ಡವನ್ನು ಮುನ್ನಡೆಸಿದ್ದಾರೆ.

SCROLL FOR NEXT