ಕ್ರಿಕೆಟ್

ಇಂಡೋ-ಪಾಕ್ ಪಂದ್ಯದ ಮೇಲೆ ಅರ್ಥ್ ಅವರ್ ಕರಿ ನೆರಳು

Srinivasamurthy VN

ಕೋಲ್ಕತಾ: ವಿಶ್ವಾದ್ಯಂತ ಸ್ಥಳೀಯ ಕಾಲಮಾನ 8.30ರಿಂದ 9.30ರವರೆಗೆ ಅರ್ಥ್ ಅವರ್ ಆಚರಣೆಯಾಗಲಿದ್ದು, ಕೋಲ್ಕತಾದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ   ಪಂದ್ಯದ ಮೇಲೆ ಅರ್ಥ್ ಅವರ್ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಇಂದು ಸಂಜೆ 7.30ರಿಂದ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಕೋಲ್ಕತಾದ ಈಡನ್ ಗಾರ್ಡೆನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.  ಇನ್ನು ಅರ್ಥ್ ಅವರ್ ಆಚರಣೆ ಇರುವುದರಿಂದ ಭಾರತೀಯ ಕಾಲಮಾನ ರಾತ್ರಿ 8.30ರಿಂದ 9.30 ರವರೆಗೆ ದೇಶದ ಬಹುತೇಕ ಭಾಗಗಳಲ್ಲಿ ವಿದ್ಯುತ್ ದೀಪಗಳನ್ನು ಆರಿಸಲಿದ್ದು, ಇದು ಕ್ರಿಕೆಟ್  ನೇರ ಪ್ರಸಾರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಅರ್ಥ್ ಅವರ್ ನಿಂದ ಪಂದ್ಯಕ್ಕೆ ಅಡ್ಡಿ ಇಲ್ಲ
ಇನ್ನು ವಿಶ್ವಾದ್ಯಂತ ಏಕಕಾಲದಲ್ಲಿ ನಡೆಯಲಿರುವ ಅರ್ಥ ಅವರ್ ನಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು  ಆಯೋಜಕರು ಹೇಳಿದ್ದಾರೆ. ಕೋಲ್ಕತಾದ ಈಡನ್ ಗಾರ್ಡೆನ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ರಾತ್ರಿ ಪಂದ್ಯವಾದ್ದರಿಂದ ಫ್ಲಡ್ ಲೈಟ್ ಗಳಡಿಯಲ್ಲಿ ಆಡಿಸಲಾಗುತ್ತಿದೆ. ನೇರ ಪ್ರಸಾದದಲ್ಲಿ  ಕೊಂಚ ಏರುಪೇರಾಗಬಹುದೇ ಹೊರತು ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT