ಕೋಲ್ಕತಾ: ವಿಶ್ವಕಪ್ ಟಿ20 ಟೂರ್ನಿ ಆರಂಭವಾದ ದಿನದಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಭಾರತ - ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯ ಶನಿವಾರ ಸಂಜೆ ನಡೆಯಲಿದ್ದು, ಅಭಿಮಾನಿಗಳಲ್ಲಿ ಆಕ್ರೋಶ ಹಾಗೂ ಆಘಾತಕ್ಕೂ ಕಾರಣವಾಗಿದೆ.
ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣದ ಬಳಿ ಹಲವು ಅಹಿತಕರ ಘಟನೆಗಳಿಗೆ ಪಂದ್ಯ ಸಾಕ್ಷಿಯಾಗುತ್ತಿದೆ. ಇಂದು ಸಂಜೆ ನಡೆಯುವ ಹೈ ವೋಲ್ಟೇಜ್ ಪಂದ್ಯ ನೋಡಲು ಅಭಿಮಾನಿಗಳು ಟಿಕೆಟ್ ಅನ್ನು ಮುದ್ರಿತ ಬೆಲೆಗಿಂತಲೂ 20 ಪಟ್ಟು ಹೆಚ್ಚು ಹಣ ಕೊಟ್ಟು ಬ್ಲಾಕ್ ನಲ್ಲಿ ಖರೀದಿಸುತ್ತಿದ್ದಾರೆ.
500 ರುಪಾಯಿ ಬೆಲೆ ಟಿಕೆಟ್ ಗಳು 7ರಿಂದ 10 ಸಾವಿರ ರುಪಾಯಿಗೆ ಮಾರಾಟವಾಗುತ್ತಿವೆ. ಇನ್ನು 1000 ಮತ್ತು 1500 ಬೆಲೆಯ ಟಿಕೆಟ್ ಗಳು 15 ಸಾವಿರದಿಂದ 20 ಸಾವಿರ ರುಪಾಯಿಗೆ ಮಾರಾಟವಾಗುತ್ತಿವೆ.
ಪ್ರತಿ ಬಾರಿಗಿಂತಲೂ ಈ ಬಾರಿ ಭಾರತ-ಪಾಕಿಸ್ತಾನ ಪಂದ್ಯ ನೋಡುವ ಕ್ರೇಜ್ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಟ್ರಸ್ಟೀ ಗೌತಮ್ ದಾಸಗುಪ್ತ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಮಗೆ ಮೀಸಲಿದ್ದ ಟಿಕೆಟ್ ಗಳನ್ನು ನೀಡಿಲ್ಲ ಎಂದು ಆರೋಪಿಸಿ ನಿನ್ನೆ ಗೋಲ್ಡ್ ಕಾರ್ಡ್ ಸದಸ್ಯರು ಸಾಲ್ಟ್ ಲೇಕ್ ಸ್ಡೇಡಿಯಂ ಬಳಿ ಧರಣಿ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics