ಈಡೆನ್ ಗಾರ್ಡೆನ್ಸ್ ನಲ್ಲಿ ಸಚಿನ್ ತೆಂಡೂಲ್ಕರ್ 
ಕ್ರಿಕೆಟ್

ಪಾಕ್ ವಿರುದ್ಧ ಪಂದ್ಯ ಗೆದ್ದ ಟೀಂ ಇಂಡಿಯಾಗೆ ಸಚಿನ್ ವಿಶೇಷ ಸಂದೇಶ

ಇದೊಂದು ಅದ್ಭುತ ಗೆಲವು ಟೀಂ ಇಂಡಿಯಾ. ಈ ಇನ್ನಿಂಗ್ಸ್ ಮತ್ತು ಆ ನಮನಕ್ಕಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಪಂದ್ಯ ಮುಗಿದ....

ಮುಂಬೈ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿದ ಟೀಂ ಇಂಡಿಯಾಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಶೇಷ ಸಂದೇಶ ನೀಡಿದ್ದಾರೆ.
ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡೆನ್ಸ್ ನಲ್ಲಿ ಪಂದ್ಯ ವೀಕ್ಷಿಸಿದ ಸಚಿನ್ ತೆಂಡೂಲ್ಕರ್, ಭಾರತೀಯ ತಂಡಕ್ಕೆ ಹುರುಪು ತುಂಬುತ್ತಿದ್ದುದು ಕಂಡು ಬಂತು. ಸಚಿನ್ ಈಡೆನ್ ಮೈದಾನಕ್ಕೆ ಕಾಲಿಟ್ಟಾಗ ಅಭಿಮಾನಿಗಳು ಸಚಿನ್..ಸಚಿನ್...ಎಂದು ಕೂಗುತ್ತಾ ಸಚಿನ್‌ಗೆ ಸ್ವಾಗತ ಕೋರಿದ್ದರು.
ಪಂದ್ಯದುದ್ದಕ್ಕೂ ಭಾರತದ ತಂಡವನ್ನು ಪ್ರೋತ್ಸಾಹಿಸುತ್ತಾ ಬಂದ ಸಚಿನ್ ಭಾರತ ಪಾಕ್‌ನ್ನು ಪರಾಭವಗೊಳಿಸಿದ ನಂತರ ಫೇಸ್‌ಬುಕ್‌ನಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿ ಸಂದೇಶ ಬರೆದಿದ್ದಾರೆ.
ಇದೊಂದು ಅದ್ಭುತ ಗೆಲವು ಟೀಂ ಇಂಡಿಯಾ. ಈ ಇನ್ನಿಂಗ್ಸ್ ಮತ್ತು ಆ ನಮನಕ್ಕಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ಮರಳುವಾಗ ನನ್ನತ್ತ ಕೈ ಬೀಸಿದರು. ನಾನು ಅವರ ಟೀಂ ನಿಂದ ಹೊರೆಗೆ ಬಂದೇ ಇಲ್ಲ ಎಂಬ ಅನುಭವ ನನಗೆ... ಎಂದು ಸಚಿನ್ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇರಾನ್ ಅಧ್ಯಕ್ಷ-ಮೋದಿ ಮಹತ್ವದ ಭೇಟಿ

ಪಾಕ್ ನಲ್ಲಿ ಮತ್ತೆ 'ಧುರಂದರ್' ಸ್ಟೈಲ್ ಕಿಲ್ಲಿಂಗ್? ಜೈಶ್ ಉಗ್ರ Lakhvi ಸಂಬಂಧಿ ತಲೆಗೆ ಗುಂಡಿಕ್ಕಿದ ‘ಅನಾಮಿಕ ಗನ್‌ಮ್ಯಾನ್‌’! Video

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಆಟಗಾರ್ತಿ!

Toxic Box Office Collection: ಕುಸಿತದ ನಡುವೆ 5ನೇ ದಿನ 200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’