ಕ್ರಿಕೆಟ್

ಈ ಬಾರಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆಲ್ಲಲಿದೆ: ಆಸಿಸ್ ಕೋಚ್‌ ಲೆಹ್‌ಮನ್‌

Lingaraj Badiger
ಸಿಡ್ನಿ: ಆಸಿಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್‌ ಗೆಲ್ಲಲಿದೆ ಎಂದು ಆಸ್ಟ್ರೇಲಿಯಾದ ಕೋಚ್‌ ಡ್ಯಾರೆನ್‌ ಲೆಹ್‌ಮನ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 51 ಎಸೆತಗಳಲ್ಲಿ 82 ರನ್‌ ಬಾರಿಸಿ ಮೂಲಕ ಭಾರತಕ್ಕೆ ಆರು ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟ ವಿರಾಟ್‌ ಕೊಹ್ಲಿ ಅವರ ಏಕಾಂಗಿ ಸಾಹಸವನ್ನು ಲೆಹ್‌ಮನ್‌ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಈ ಟೂರ್ನಿಯಲ್ಲಿ ಭಾರತ ಇನ್ನು ಸೋಲಬಹುದೆಂದು ನನಗೆ ಅನ್ನಿಸುವುದಿಲ್ಲ; ಅವರು ಕಪ್‌ ಗೆಲ್ಲುವುದು ನಿಶ್ಚಿತ; ಇದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಲೆಹ್‌ಮನ್‌ "ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌' ಜತೆ ಮಾತನಾಡುತ್ತಾ ಹೇಳಿದ್ದಾರೆ.
ಸೆಮಿ ಫೈನಲ್‌ಗೆ ಏರುವ ಆಸ್ಟೇಲಿಯಾದ ಕನಸನ್ನು ಭಾರತ ನುಚ್ಚುನೂರುಗೊಳಿಸಿರುವುದನ್ನು ಅವರು ಕ್ರೀಡಾ ಮನೋಭಾವದಿಂದ ಮೆಚ್ಚಿಕೊಂಡಿದ್ದಾರೆ. ಇದೇ ಗುರುವಾರ ಮಾರ್ಚ್‌ 31ರಂದು ಮುಂಬಯಿಯಲ್ಲಿ ಭಾರತವು ವೆಸ್ಟ್‌ ಇಂಡೀಸ್‌ ವಿರುದ್ಧ ಸೆಮಿ ಫೈನಲ್‌ ಸೆಣಲಿಸಿದೆ.
2007ರಲ್ಲಿ ಭಾರತ ಚೊಚ್ಚಲ ಟಿ-20 ವಿಶ್ವಕಪ್‌ ಗೆದ್ದು ಇತಿಹಾಸ ಮಾಡಿತ್ತು. ಈ ಬಾರಿಯೂ ಈ ಕಪ್‌ ಗೆಲ್ಲುವ ಫೆವರೀಟ್‌ ತಂಡ ಭಾರತವೇ ಆಗಿದೆ.
SCROLL FOR NEXT