ವಿರಾಟ್ ಕೊಹ್ಲಿ 
ಕ್ರಿಕೆಟ್

ದೈತ್ಯ ಕ್ರಿಸ್ ಗೇಲ್ ಗೂ ಕೊಹ್ಲಿ ಕಂಡರೆ ಭಯಾನಾ...!

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರ ಬ್ಯಾಟಿಂಗ್ ಇತರ ದೈತ್ಯ ತಂಡಗಳಿಗೂ ಭಯ ಹುಟ್ಟಿಸಿದ್ದು, ವಿರಾಟ್ ದಯವಿಟ್ಟು ನಮ್ಮ ಎದುರು ಸ್ಫೋಟಿಸಬೇಡಿ...

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರ ಬ್ಯಾಟಿಂಗ್ ಇತರ ದೈತ್ಯ ತಂಡಗಳಿಗೂ ಭಯ ಹುಟ್ಟಿಸಿದ್ದು, ವಿರಾಟ್ ದಯವಿಟ್ಟು ನಮ್ಮ ಎದುರು ಸ್ಫೋಟಿಸಬೇಡಿ ಎಂದು ಸ್ವತಃ ಚುಟುಕು ಕ್ರಿಕೆಟ್ ಜಗತ್ತಿನ ಅಬ್ಬರದ ಬ್ಯಾಟ್ಸ್ ಮನ್ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 30ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿದ್ದು, ನಮ್ಮ ತಂಡದ ಎದುರು ವಿರಾಟ್‌ ಹೆಚ್ಚು ರನ್ ಗಳಿಸುವುದಿಲ್ಲ ಎಂಬ ವಿಶ್ವಾಸವಿದೆ. ಅವರು ರನ್ ಗಳಿಸಿದರೂ ತಮ್ಮ ತಂಡದ ಜಯಕ್ಕೆ ನೆರವು ನೀಡುವಷ್ಟು ಆಡದಿರಲಿ ಎಂದು ಚಟಾಕಿ ಹಾರಿಸಿದರು.

ವಿರಾಟ್ ಆಟದ ಬಗ್ಗೆ ಅಚ್ಚರಿ ಇಲ್ಲ. ಹಲವು ವರ್ಷಗಳ ಹಿಂದೆಯೇ ನಾನು ಅವರ ಕುರಿತು ಹೇಳಿದ್ದೆ. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುವ ಪ್ರತಿಭೆ ಎಂದು ಉಲ್ಲೇಖಿಸಿದ್ದೆ. ಅದನ್ನು ಈಗ ನಾವು ನೋಡುತ್ತಿದ್ದೇವೆ. ಅವರು ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT