ಮುಂಬೈ: ವಿಶ್ವಕಪ್ ಟಿ20 ಪಂದ್ಯಾವಳಿಯ ಎರಡನೇ ಸೆಮಿ ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಟೀಂ ಇಂಡಿಯಾ, ಎರಡನೇ ಬಾರಿ ವಿಶ್ವಕಪ್ ಟಿ20 ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ವಿಂಡೀಸ್ ಸಹ ಬಲಿಷ್ಠ ತಂಡವಾಗಿರುವುದರಿಂದ ಫೈನಲ್ ಪ್ರವೇಶಿಸಲು ತೀವ್ರ ಹಣಾಹಣಿ ನಡೆಯಲಿದೆ.
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಅವರು 43ರನ್ ಹಾಗೂ ಅಜಿಂಕ್ಯಾ ರಹಾನೆ 40ರನ್ ಗಳಿಸಿ ಔಟಾಗಿದ್ದು, ಭಾರತ 2 ವಿಕೆಟ್ ನಷ್ಟಕ್ಕೆ, 16 ಓವರ್ ಗಳಲ್ಲಿ 140ರನ್ ಕಲೆ ಹಾಕಿದೆ.
ಪ್ರಮುಖ ಟೂರ್ನಿಗಳ ಅಂಕಿ ಅಂಶಗಳು ಭಾರತದ ಪರವಾಗಿದ್ದು, ವೆಸ್ಟ್ ಇಂಡೀಸ್ ಎದುರು ಭಾರತವೇ ಗೆಲ್ಲುವ ಫೇವರಿಟ್ ಎಂದು ಹೇಳಲಾಗುತ್ತಿದೆ.
ಟೂರ್ನಿಯಲ್ಲಿ ಉತ್ತಮವಾಗಿ ಆಡಿ ಸೆಮಿ ಫೈನಲ್ ಪ್ರವೇಶಿಸಿರುವ ವಿಂಡೀಸ್ ತಂಡದ ಪ್ರಮುಖ ಅಸ್ತ್ರವೆಂದರೆ ಅದು ಆ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ. ಆರಂಭಿಕ ಆಟಗಾರ ಆಂಡ್ರೆ ಫ್ಲೆಚರ್ ರಿಂದ ಹಿಡಿದು ಚಾರ್ಲ್ಸ್, ಕ್ರಿಸ್ ಗೇಯ್ಲ್, ಸ್ಯಾಮುಯೆಲ್ಸ್, ಡರೆನ್ ಸಾಮಿ, ಡ್ವೇಯ್ನ್ ಬ್ರಾವೋ ಮತ್ತು ದಿನೇಶ್ ರಾಮ್ ದಿನ್ ಸೇರಿದಂತೆ ಎಲ್ಲರೂ ಉತ್ತಮ ಬ್ಯಾಟ್ಸಮನ್ ಗಳೇ ಇನ್ನು ಬ್ರಾತ್ ವೇಟ್ ಮ್ತತು ರಸೆಲ್ ರಂತಹ ಆಲ್ ರೌಂಡರ್ ಗಳು ಕೂಡ ವಿಂಡೀಸ್ ತಂಡದಲ್ಲಿ ಅಗತ್ಯ ಇವರ ಬ್ಯಾಟ್ ಗಳಿಂದಲೂ ಸಹ ರನ್ ಹೊಳೆ ಹರಿಯಬಲ್ಲದು. ಇದು ವಿಂಡೀಸ್ ತಂಡದ ಶಕ್ತಿ.
ಅಂತೆಯೇ ಭಾರತದ ವಿಚಾರಕ್ಕೆ ಬರುವುದಾದರೆ ಆಸ್ಚ್ರೇಲಿಯಾ ವಿರುದ್ಧದ ದೊಡ್ಡ ಮೊತ್ತದ ಗುರಿಯ ಪಂದ್ಯವನ್ನು ಹೊರತು ಪಡಿಸಿದರೆ ಭಾರತ ಗೆದ್ದ ಉಳಿದೆಲ್ಲಾ ಪಂದ್ಯಗಳಲ್ಲಿ ತನ್ನ ಬೌಲಿಂಗ್ ಸಾಮರ್ಥ್ಯದಿಂದಲೇ ಗೆದ್ದಿದೆ. ಬಾಂಗ್ಲಾದೇಶದ ವಿರುದ್ಧ ಸೋಲುವ ಪಂದ್ಯವನ್ನು ಮತ್ತು ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದು, ಭಾರತೀಯ ಬೌಲರ್ ಗಳು ಎಂಬುದನ್ನು ಮರೆಯಬಾರದು. ಹೀಗಾಗಿ ಭಾರತದ ಬೌಲಿಂಗ್ ಪಡೆಯನ್ನು ಆ ತಂಡ ಪ್ರಮುಖ ಅಸ್ತ್ರವೆಂದು ಪರಿಗಣಿಸಿದರೂ ತಪ್ಪಿಲ್ಲ. ಅಶ್ವಿನ್, ರವೀಂದ್ರ ಜಡೇಜಾ, ಬಾಂಗ್ಲಾ ಪಂದ್ಯದ ಹೀರೋ ಪಾಂಡ್ಯಾ, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾಹ್ ಮತ್ತು ಹಿರಿಯ ವೇಗಿ ಆಶೀಶ್ ನೆಹ್ರಾ ತಂಡ ಪ್ರಮುಖ ಬೌಲಿಂಗ್ ಅಸ್ತ್ರಗಳಾದರೆ, ರೈನಾ ಪಾರ್ಟ್ ಟೈಮ್ ಬೌಲರ್ ಆಗಿ ಯಶಸ್ವಿಯಾಗಿರುವುದು ತಂಡಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.