ಕ್ರಿಕೆಟ್

ವಾಂಖೆಡೆ ಕ್ರೀಡಾಂಗಣದಲ್ಲಿ ಉಚಿತವಾಗಿ ಪಂದ್ಯ ವೀಕ್ಷಿಸಿದ 250 'ಮಹಾ' ಅಧಿಕಾರಿಗಳು

Srinivas Rao BV

ನವದೆಹಲಿ: ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ- ವೆಸ್ಟ್ ಇಂಡೀಸ್ ನಡುವಿನ ಸೆಮಿ ಫೈನಲ್ಸ್ ಪಂದ್ಯವನ್ನು ವೀಕ್ಷಿಸಲು ಉದ್ಯಮಿಗಳು, ಬಾಲಿವುಡ್ ನ ಸೆಲಬ್ರಿಟಿಗಳು ಆಗಮಿಸಿದ್ದರು. ಇವರೊಂದಿಗೆ ಮಹಾರಾಷ್ಟ್ರದಿಂದ 250 ಅಧಿಕಾರಿಗಳೂ ಸಹ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಿದ್ದಾರೆ.
ಇದರಲ್ಲೇನು ವಿಶೇಷ ಅಂದ್ರಾ? ಪಂದ್ಯ ವೀಕ್ಷಿಸಿರುವ ಮಹಾರಾಷ್ಟ್ರದ 250 ಅಧಿಕಾರಿಗಳು ಒಂದು ಬಿಡಿಗಾಸನ್ನೂ ಖರ್ಚು ಮಾಡಿಲ್ಲ ಎನ್ ಡಿ ಟಿವಿ ವರದಿ ಮಾಡಿದೆ. ಇದಕ್ಕೆ ಕಾರಣವು ಇದೆ.ಮುಂಬೈ ನಲ್ಲಿ ವಾಂಖೆಡೆ ಕ್ರಿಕೆಟ್ ಮೈದಾನಕ್ಕೆ ಭೂಮಿ ಮಂಜೂರು ಮಾಡಬೇಕಾದರೆ  1974 ರಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೂ, ಕ್ರಿಕೆಟ್ ಸಂಸ್ಥೆಗೂ ನಡೆದಿರುವ ಒಪ್ಪಂದದ ಪ್ರಕಾರ, ವಾಂಖೆಡೆಯಲ್ಲಿ ಪ್ರತಿ ಅಂತಾರಾಷ್ಟ್ರೀಯ ಪಂದ್ಯ ನಡೆದಾಗಲೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಹಾರಾಷ್ಟ್ರ ಸರ್ಕಾರಕ್ಕೆ 250 ಟಿಕೆಟ್ ಗಳನ್ನು ಉಚಿತವಾಗಿ ನೀಡಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ.  
ಸರ್ಕಾರಕ್ಕೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನೀಡಿರುವ ಟಿಕೆಟ್ ನಿಂದ 250 ಅಧಿಕಾರಿಗಳು ಉಚಿತವಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸ್ವಾಧೀನ್ ಕ್ಷತ್ರಿಯ ಅವರು ಅಧಿಕಾರಿಗಳಿಗೆ ಟಿಕೆಟ್ ವ್ಯವಸ್ಥೆ ಮಾಡಿದರೆ ಶೀಲರ್ ತಮ್ಮ ಸ್ವಂತ ಶಕ್ತಿಯಿಂದ ವಿಧಾನಸಭಾ ಸದಸ್ಯರಿಗೆ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.
33 ,000 ಜನರ ಸಾಮರ್ಥ್ಯವಿರುವ ವಾಂಖೆಡೆ ಕ್ರೀಂಡಾಂಗಣದಲ್ಲಿ ಒಟ್ಟು 14 ,000 ಟಿಕೆಟ್ ಗಳನ್ನು ಸ್ಪಾನ್ಸರ್ ಗಳಿಗೆ, ಆಟಗಾರರಿಗೆ, ಅಧಿಕಾರಿಗಳಿಗೆ ಹಾಗೂ ಜಾಹಿರಾತುದಾರರಿಗೆ ನೀಡಲಾಗಿತ್ತು. ಉಳಿದ  19,000 ಟಿಕೆಟ್ ಗಳನ್ನು ಪಡೆಯಲು ಕ್ರಿಕೆಟ್ ಅಭಿಮಾನಿಗಳು ಹರಸಾಹಸ ಮಾಡಬೇಕಾಯಿತು.

SCROLL FOR NEXT