ವಿಶಾಖಪಟ್ಟಣ: ಗೆಲುವಿನ ಲಯಕ್ಕೆ ಮರಳಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 85 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ.
ಮಹಾರಾಷ್ಟ್ರದಿಂದ ಪಂದ್ಯಗಳು ಸ್ಥಳಾಂತರಗೊಂಡ ನಂತರ ಡಾ.ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತು. 178 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 92 ರನ್ ಗಳಿಗೆ ಸರ್ವಪತನ ಕಂಡಿತು.
ಮುಂಬೈ ಪರ ರೋಹಿತ್ ಶರ್ಮಾ 5, ಪಾರ್ಥಿವ್ ಪಟೇಲ್ 0, ಅಂಬಟ್ಟಿ ರಾಯುಡು 6, ಕೃನಾಲ್ ಪಾಂಡ್ಯ 17, ಬಟ್ಲರ್ 2, ಪೊಲ್ಲಾರ್ಡ್ 11, ಹಾರ್ದಿಕ್ ಪಟೇಲ್ 7, ಸೌಥಿ 3, ಮೆಕ್ಲಿನಘನ್ 8, ಬುಮ್ರಾ 6 ಹಾಗೂ ಹರ್ಭಜನ್ ಸಿಂಗ್ ಅಜೇಯ 21 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಆಶಿಶ್ ನೆಹ್ರಾ ಹಾಗೂ ಮುಸ್ತಾಫಿಜುರ್ ತಲಾ 3, ಬರೀಂದರ್ ಸರ್ನ್ 2, ಭುವನೇಶ್ವರ್ ಹಾಗೂ ಹೆನ್ರಿಕ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ.
ಸನ್ ರೈಸರ್ಸ್ ಪರ ಡೇವಿಡ್ ವಾರ್ನರ್ 48, ಶಿಖರ್ ಧವನ್ ಅಜೇಯ 82, ವಿಲಿಯಮ್ಸನ್ 2, ಯುವರಾಜ್ 39 ಹಾಗೂ ಮೊಯ್ಸೆಸ್ ಹೆನ್ರಿಕ್ಸ್ ಅಜೇಯ 1 ರನ್ ಗಳಿಸಿದ್ದಾರೆ.
ಮುಂಬೈ ಪರ ಹರ್ಭಜನ್ ಸಿಂಗ್ 2, ಮೇಕ್ಲಿನಘರ್ 1 ವಿಕೆಟ್ ಪಡೆದಿದ್ದಾರೆ.