ಐಪಿಎಲ್ 9ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 22 ರನ್ ಗಳಿಂದ ಸೋಲು ಅನುಭವಿಸಿದ್ದು, ಕೆಕೆಆರ್ ಫೈನಲ್ ಎಂಟ್ರಿ ಕನಸು ಕಮರಿದೆ.
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ 22 ರನ್ ಗಳಿಂದ ಸೋಲು ಕಂಡಿತು.
ಕೊಲ್ಕತ್ತಾ ಪರ ರಾಬಿನ್ ಉತ್ತಪ್ಪ 11, ಗೌತಮ್ ಗಂಭೀರ್ 28, ಮನ್ರೋ 16, ಮನೀಷ್ ಪಾಂಡ್ಯೆ 36, ಯುಸೂಫ್ ಪಠಾಣ್ 2, ಯಾದವ್ 23, ಸತೀಶ್ 8 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಭುವನೇಶ್ವರ ಕುಮಾರ್ 3, ಹೆನ್ರಿಕ್ಸ್ 2 ವಿಕೆಟ್ ಪಡೆದಿದ್ದಾರೆ.
ಹೈದರಾಬಾದ್ ಪರ ಡೇವಿಡ್ ವಾರ್ನರ್ 28, ಶಿಖರ್ ಧವನ್ 10, ಹೆನ್ರಿಕ್ಸ್ 31, ಯುವರಾಜ್ ಸಿಂಗ್ 44, ಹೂಡಾ 21 ರನ್ ಗಳಿಸಿದ್ದಾರೆ.
ಕೆಕೆಆರ್ ಪರ ಕುಲ್ದೀಪ್ ಯಾದವ್ 3, ಮಾರ್ಕೆಲ್ ಹಾಗೂ ಹೊಲ್ಡೆರ್ ತಲಾ 2 ವಿಕೆಟ್ ಪಡೆದಿದ್ದಾರೆ.