ಬೆಂಗಳೂರು: ಐಪಿಎಲ್ ಫೈನಲ್ ಗೆ ಎಂಟ್ರಿ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬಿಂದಾಸ್ ಜೋಶ್ ನಲ್ಲಿದ್ದಾರೆ. ಇತ್ತೀಚೆಗಷ್ಟೇ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್ ಹಾಗೂ ಮನ್ ದೀಪ್ ಸಿಂಗ್ ಕುಣಿದು ಕುಪ್ಪಳಿಸಿದ್ದಾರೆ.
ಪಂಜಾಬಿ ನೃತ್ಯಕ್ಕೆ ಈ ಮೂವರು ಆಟಗಾರರು ಕುಣಿಯುತ್ತಿರುವ ವಿಡಿಯೋವನ್ನು ಮನ್ ದೀಪ್ ಸಿಂಗ್ ತಮ್ಮ ಫೇಸ್ ಬುಕ್ ಪುಟದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಭಾರೀ ಜನಪ್ರಿಯವಾಗಿದೆ. ಮನ್ ದೀಪ್ ಸಿಂಗ್ ಗೇಯ್ಲ್ ಹಾಗೂ ಕೊಹ್ಲಿಗೆ ಪಂಜಾಬಿ ನೃತ್ಯ ಹೇಳಿಕೊಡುತ್ತಾರೆ. ಮೊದಲು ಗೇಯ್ಲ್ ಕುಣಿಯುತ್ತಾರೆ ಬಳಿಕ ಕೊಹ್ಲಿ ಬಂದು ಜತೆಯಾಗಿ ಕುಣಿಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಇದನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.