ನವದೆಹಲಿ: ರಾಜ್ ಕೋಟ್ ನಲ್ಲಿ ನ.9 ರಿಂದ ನಡೆಯಲಿರುವ ಭಾರತ-ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯಾವಳಿಗೆ ಹಣ ಬಿಡುಗಡೆ ಮಾಡಲು ಬಿಸಿಸಿಐ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವವರೆಗೆ ರಾಜ್ಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಮನವಿ ಸಲ್ಲಿಸಿದ್ದು, ಪಂದ್ಯ ನಡೆಸುವುದಕ್ಕೆ ಹಣ ಬಿಡುಗಡೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.
ಸುಪ್ರೀಂ ಕೋರ್ಟ್ ನ ನ್ಯಾ.ಅನಿಲ್ ಆರ್ ದಾವೆ ಹಾಗೂ ನ್ಯಾ. ಎಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಎದುರು ಹಾಜರಾಗಿ ಹೇಳಿಕೆ ನೀಡಿರುವ ವಕೀಲ ಕಪಿಲ್ ಸಿಬಲ್ ಹಣ ಬಿಡುಗಡೆ ಮಾಡಲು ಅನುಮತಿ ನೀಡುವವರೆಗೂ ನ.9ರಂದು ರಾಜ್ ಕೋಟ್ ನಲ್ಲಿ ನಡೆಯಬೇಕಿರುವ ಭಾರತ- ಇಂಗ್ಲೆಂಡ್ ಪಂದ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.