ಕ್ರಿಕೆಟ್

ಅಧ್ಯಕ್ಷರನ್ನು ಈಡಿಯಟ್ ಎಂದ ಡರೇನ್ ಬ್ರಾವೋ ವಿಂಡೀಸ್ ತಂಡದಿಂದ ಔಟ್!

Srinivasamurthy VN

ಸೆಂಟ್ ಜಾನ್ಸ್: ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಮಂಡಳಿ ಅಧ್ಯಕ್ಷರ ವಿರುದ್ಧ ಈಡಿಯಟ್ ಎಂದು ನಿಂದನೆ ಮಾಡಿದ್ದ ವಿಂಡೀಸ್ ಕ್ರಿಕೆಟಿಗ ಡರೇನ್ ಬ್ರಾವೋ ಅವರನ್ನು ರಾಷ್ಟ್ರೀಯ ಏಕದಿನ ತಂಡದಿಂದ ಕೈ ಬಿಡಲಾಗಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರ ಗುತ್ತಿಗೆ ವಿಚಾರ ತಾರಕಕ್ಕೇರಿದ್ದು, ಆಟಗಾರರು ಮತ್ತು ಮಂಡಳಿ ವಿರುದ್ಧ ವಾಕ್ಸಮರ ಮುಂದುವರೆದಿದೆ. ಟಿ20 ವಿಶ್ವಕಪ್ ಬಳಿಕ ಜಗಜ್ಜಾಹಿರಾಗಿದ್ದ ಈ ವಿಚಾರ ನಿನ್ನೆ ಮತ್ತೊಂದು ಹಂತ ತಲುಪಿದ್ದು,  ವಿಂಡೀಸ್ ಕ್ರಿಕೆಟಿಗ ಡರೇನ್ ಬ್ರಾವೋ ಮಂಡಳಿ ಅಧ್ಯಕ್ಷ ಕಮೆರಾನ್ ರನ್ನು ಈಡಿಯಟ್ ಎಂದು ನಿಂದಿಸುವ ಮೂಲಕ ದಂಡನೆಗೆ ಒಳಗಾಗಿದ್ದಾರೆ. ಮುಂಬರುವ ವಿಂಡೀಸ್ ತಂಡದ ಏಕದಿನ ಸರಣಿಗೆ ಬ್ರಾವೋ ಅವರನ್ನು ಕೈ  ಬಿಡಲಾಗಿದ್ದು, ಅವರ ಬದಲಿಗೆ ಜೇಸನ್ ಮಹಮದ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಇತ್ತೀಚೆಗೆ ನಡೆದ ಟಿವಿ ಸಂದರ್ಶನವೊಂದರಲ್ಲಿ ಆಟಗಾರರ ಗುತ್ತಿಗೆ ವಿಚಾರ ಸಂಬಂಧ ಮಾತನಾಡಿದ್ದ ವಿಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕೆಮರಾನ್ ಅವರು, ಇತ್ತೀಚೆಗಿನ ಸರಣಿಗಳಲ್ಲಿ ಡರೇನ್ ಬ್ರಾವೋ ಅವರ ಬ್ಯಾಟಿಂಗ್  ಕುಸಿದಿದ್ದು, ಹೀಗಾಗಿ ಅವರನ್ನು ಸಿ ದರ್ಜೆಗೆ ಇಳಿಸಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಖಾರವಾಗಿ ಉತ್ತರ ನೀಡಿದ್ದ ಬ್ರಾವೋ ಕಳೆದ ನಾಲ್ಕು ವರ್ಷಗಳಿಂದ ನಾನು ಕಾಯುತ್ತಿದ್ದೇನೆ. ಎಂತಹ ಉತ್ತಮ ಪ್ರದರ್ಶನ  ನೀಡಿದರೂ ತಮ್ಮಂಥಹ ಆಟಗಾರರಿಗೆ ಎ ದರ್ಜೆಯ ಮನ್ನಣೆ ಸಿಗುತ್ತಿಲ್ಲ. ಸಮರ್ಥ ಆಟಗಾರರನ್ನು ಗುರುತಿಸಲು ಆಗದ ನೀನೇಕೆ ರಾಜಿನಾಮೆ ನೀಡಬಾರದು ಈಡಿಯಟ್ ಎಂದು ನಿಂದಿಸಿದ್ದರು.

ಇದರ ಬೆನ್ನಲ್ಲೇ ಅವರನ್ನು ವಿಂಡೀಸ್ ತಂಡದಿಂದ ಕೈ ಬಿಡಲಾಗಿದೆ.

SCROLL FOR NEXT