ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಪಟ್ಟಿ ಬಿಡುಗಡೆ ಮಾಡಿದ್ದು ಕನ್ನಡಿಗ ಮನೀಷ್ ಪಾಂಡ್ಯೆ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡಿಗರಾಗಿದ್ದಾರೆ.
ಎಂಎಸ್ ಧೋನಿ ಸಾರಥ್ಯದ 15 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಉತ್ತಮ ಫಾರ್ಮ್ ನಲ್ಲಿದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿದ್ದಾರೆ.
ಏಕದಿನ ಸರಣಿ ವೇಳಾಪಟ್ಟಿಯ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಏಕದಿನ ಪಂದ್ಯಗಳಿಗೆ 15 ಮಂದಿ ತಂಡವನ್ನು ಪ್ರಕಟಿಸಲಾಗಿದೆ. ಯುವರಾಜ್ ಸಿಂಗ್ ರನ್ನು ಕಡೆಗಣಿಸಲಾಗಿದ್ದರೆ, ಆಲ್ ರೌಂಡರ್ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಮೊದಲ ಏಕದಿನ ಪಂದ್ಯ ಧರ್ಮಶಾಲದಲ್ಲಿ ಅಕ್ಟೋಬರ್ 16ರಂದು ಆರಂಭವಾಗಲಿದೆ. ಅಕ್ಟೋಬರ್ 29ರಂದು ವಿಶಾಖಪಟ್ಟಣಂನಲ್ಲಿ ಐದನೇ ಹಾಗೂ ಅಂತಿಮ ಪಂದ್ಯ ನಿಗದಿಯಾಗಿದೆ.
ಟೀಂ ಇಂಡಿಯಾ
ಎಂಎಸ್ ಧೋನಿ(ನಾಯಕ), ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ. ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್ಪ್ರೀತ್ ಬೂಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್ದೀಪ್ ಸಿಂಗ್, ಕೇದಾರ್ ಜಾಧವ್