ಎಂಎಸ್ ಧೋನಿ, ಲಿಯೆನ್ನೆ ಮುರ್ರೆ 
ಕ್ರಿಕೆಟ್

ಆಸ್ಟ್ರೇಲಿಯಾದ ಈಕೆ ಧೋನಿಯ ಅಪ್ಪಟ ಅಭಿಮಾನಿ

2008ರಲ್ಲಿ ಅಡಿಲೇಡ್ ಓವಲ್ ನಲ್ಲಿ ಅಭ್ಯಾಸ ನಿರತ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು 16 ವರ್ಷದ ಲಿಯೆನ್ನ್ ಮುರ್ರೆ ಎಂಬಾಕೆ ನಿಮ್ಮ...

ನವದೆಹಲಿ: 2008ರಲ್ಲಿ ಅಡಿಲೇಡ್ ಓವಲ್ ನಲ್ಲಿ ಅಭ್ಯಾಸ ನಿರತ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು 16 ವರ್ಷದ ಲಿಯೆನ್ನ್ ಮುರ್ರೆ ಎಂಬಾಕೆ ನಿಮ್ಮ ಹೆಸರೇನು? ಎಂದು ಕೇಳಿದ್ದಳು. ಅಂದಿನಿಂದ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಮುರ್ರೆ ಧೋನಿಯ ಆಟವನ್ನು ಕಾಣಲು ಬರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ.

ಈ ಇಬ್ಬರ ನಡುವೆ ವಿಶೇಷವಾದ ಬಂಧ ಮೂಡಿದ್ದು, ತನ್ನ ಆತ್ಮೀಯ ಆಟಗಾರನ ಪಂದ್ಯ ವೀಕ್ಷಿಸಲು ಬರುತ್ತಾಳೆ. ಅದೇ ರೀತಿ ಇಂದು ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ ನಡೆಯಲಿದ್ದು ದೆಹಲಿಗೆ ದಿಢೀರ್ ಭೇಟಿ ನೀಡಿದ್ದಾರೆ. ತನ್ನ ನೆಚ್ಚಿನ ನಾಯಕ ಧೋನಿ ಮೇಲೆ ಮುರ್ರೆ ಅವರಿಗೆ ಎಂತಹ ಅಭಿಮಾನ ಇದೇ ಎಂದರೇ ಇಲ್ಲಿಯವರೆಗೂ 100ಕ್ಕೂ ಹೆಚ್ಚು ಭಾರೀ ಅನಿರೀಕ್ಷಿತ ಭೇಟಿ ನೀಡಿ ತನ್ನ ಹಿರೋ ಖುಷಿಯಲ್ಲಿ ತೇಲುವಂತೆ ಮಾಡಿದ್ದಾಳೆ.

ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದ ಧೋನಿಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಬಳಿಕ ಎಕ್ಸ್ ಪ್ರೆಸ್ ಮಾತನಾಡಿದ ಅವರು, ತನ್ನ ನೆಚ್ಚಿನ ಹಿರೋವನ್ನು ಭೇಟಿಯಾಗದೆ ತುಂಬ ದಿನಗಳು ಕಳೆದಿದ್ದವು. ಆದರೆ ಇಂದು ಅದು ಪೂರ್ತಿಯಾಗಿದೆ. ನಾನು ಭೇಟಿಯಾದಾಗಲೆಲ್ಲ ನನ್ನ ಹೀರೋ ಧೋನಿ ಅಚ್ಚರಿಯಿಂದ ಕಾಣುತ್ತಾರೆ. ನಾನು ಭೇಟಿಯಾದಾಗಲೆಲ್ಲ ಧೋನಿ ನನ್ನನ್ನು ಕೇಳುವ ಪ್ರಶ್ನೆ ನೀನೇನು ಮಾಡುತ್ತಿರುವೆ ಇಲ್ಲಿ ಎಂದು. ಹೀಗೆ 100ಕ್ಕೂ ಹೆಚ್ಚು ಬಾರಿ ಇದೇ ಪ್ರಶ್ನೆಯನ್ನು ಅವರ ಬಾಯಿಯಿಂದ ಕೇಳಿದ್ದೇನೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಧೋನಿಯನ್ನು ಅನಿರೀಕ್ಷಿತ ಭೇಟಿ ಮಾಡುವ ಮುರ್ರೆ ಅವರು ನಿಮ್ಮ ಪಂದ್ಯದ ಟಿಕೇಟ್ ನೀಡುವಂತೆ ಕೇಳಿಕೊಳ್ಳುತ್ತೇನೆ. ಧೋನಿ ಸಹ ತಮ್ಮ ಪಂದ್ಯದ ಟಿಕೇಟ್ ಅನ್ನು ನನಗೆ ನೀಡುತ್ತಾರೆ. ನಾಳಿನ ಪಂದ್ಯದ ಟಿಕೇಟ್ ಅನ್ನು ನಾಳೆ ಅವರಿಂದ ಪಡೆದು ಪಂದ್ಯ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಮುರ್ರೆ ಧೋನಿ ಅವರ ಅಪ್ಪಟ ಅಭಿಮಾನಿ ಎಂಬುದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗಷ್ಟೇ ತೆರೆಕಂಡ ಎಂಎಸ್ ಧೋನಿ, ದಿ ಅನ್ ಟೋಲ್ಡ್ ಸ್ಟೋರಿ ಚಿತ್ರ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾದ ಮೊದಲ ಶೋ ನೋಡಿ ಸಂಭ್ರಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ