ಟೇಲರ್ ರನ್ನು ಧೋನಿ ರನ್ ಔಟ್ ಮಾಡಿದ ಪರಿ (ಟ್ವಿಟರ್ ಚಿತ್ರ) 
ಕ್ರಿಕೆಟ್

ಧೋನಿ ಮ್ಯಾಜಿಕ್ ಗೆ ರಾಸ್ ಟೇಲರ್ ಔಟ್; ಟ್ವಿಟರ್ ನಲ್ಲಿ ವೈರಲ್ ಆಯ್ತು ರನ್ ಔಟ್ ದೃಶ್ಯ

ಧೋನಿ ತವರು ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ತಮ್ಮ ಕೈಚಳಕದ ಮೂಲಕ ತವರಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ.

ರಾಂಚಿ: ಧೋನಿ ತವರು ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ತಮ್ಮ ಕೈಚಳಕದ ಮೂಲಕ ತವರಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ.

ಭಾರತ ತಂಡಡ ನಾಯಕ ಎಂಎಸ್ ಧೋನಿ ಎಂತಹ ಚಾಣಾಕ್ಷ್ಯ ವಿಕೆಟ್ ಕೀಪರ್ ಎನ್ನುವುದಕ್ಕೆ ವಿಕೆಟ್ ಹಿಂದೆ ಅವರು ಹಿಡಿದಿರುವ ಕ್ಯಾಚ್ ಗಳು ಹಾಗೂ ಸ್ಟಂಪ್ ಔಟ್ ಗಳೇ ಸಾಕ್ಷಿಯಾಗಿ  ನಿಲ್ಲುತ್ತವೆ. ನಿನ್ನೆ ರಾಂಚಿಯಲ್ಲಿ ನಡೆದ 4ನೇ ಏಕದಿನ ಪಂದ್ಯ ಇದಕ್ಕೆ ಮತ್ತೊಂದು ಸ್ಪಷ್ಟ ಮತ್ತು ನಿಖರ ಉದಾಹರಣೆಯಂತಿದ್ದು, ಪಂದ್ಯದಲ್ಲಿ ನಾಯಕ ಧೋನಿ ರಾಸ್ ಟೇಲರ್ ಅವರನ್ನು ರನ್  ಔಟ್ ಮಾಡಿದ ಪರಿ ಕೇವಲ ಪ್ರೇಕ್ಷಕರಲ್ಲಿ ಮಾತ್ರವೇ ಅಲ್ಲದೇ ಸ್ವತಃ ಕ್ರಿಕೆಟ್ ತಜ್ಞರಿಗೂ ಅಚ್ಚರಿ ತಂದಿದೆ ಮತ್ತು ವಿಕೆಟ್ ಕೀಪಿಂಗ್ ನಲ್ಲಿ ಧೋನಿ ತಾವೆಷ್ಟು ನಿಪುಣರು ಎಂದು ತೋರಿಸಿಕೊಟ್ಟಿದ್ದಾರೆ.

ನ್ಯೂಜಿಲೆಂಡ್ ಇನ್ನಿಂಗ್ಸ್ ನ ಅಂತಿಮ ಘಟದಲ್ಲಿ ಅಬ್ಬರ ಬ್ಯಾಟಿಂಗ್ ನಡೆಸುತ್ತಿದ್ದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಅವರನ್ನು ಧೋನಿ ರನ್ ಔಟ್ ಮಾಡಿದ್ದರು. ಕುಲಕರ್ಣಿ ಎಸೆದ ಬಾಲ್  ಆನ್ನು ಧೋನಿ ವಿಕೆಟ್ ಅನ್ನು ನೋಡದೆಯೇ ನಿಖರವಾಗಿ ಎಸೆದು ಬೇಲ್ಸ್ ಹಾರಿಸಿದ್ದರು. ಆ ಒಂದು ಮ್ಯಾಜಿಕಲ್ ರನ್ ಔಟ್ ನಿಂದ ರಾಸ್ ಟೇಲರ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT