ಶಿಖರ್ ಧವನ್ 
ಕ್ರಿಕೆಟ್

ಆರಂಭಿಕ ಸ್ಥಾನಕ್ಕೆ ಮೂವರ ಪೈಪೋಟಿ ಒಳ್ಳೆಯದ್ದೇ: ಶಿಖರ್ ಧವನ್

ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಹಾಗೂ ಉತ್ಯುತ್ತಮ ಆಟಗಾರ ಮುರಳಿ ವಿಜಯ್ ಅವರೊಂದಿಗೆ ಆರಂಭಿಕ ಕ್ರಮಾಂಕಕ್ಕಾಗಿ ಸ್ಪರ್ಧಿಸುತ್ತಿರುವುದು...

ಗ್ರೇಟರ್ ನೋಯ್ಡಾ: ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಹಾಗೂ ಉತ್ಯುತ್ತಮ ಆಟಗಾರ ಮುರಳಿ ವಿಜಯ್ ಅವರೊಂದಿಗೆ ಆರಂಭಿಕ ಕ್ರಮಾಂಕಕ್ಕಾಗಿ ಸ್ಪರ್ಧಿಸುತ್ತಿರುವುದು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದ್ದು ಇದರಲ್ಲಿ ತಪ್ಪೇನು ಇಲ್ಲ ಎಂದು ಶಿಖರ್ ಧವನ್ ಹೇಳಿದ್ದಾರೆ.

ಈ ಹಿಂದಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ನ್ಯೂಜಿಲಾಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಲು ಮೂವರು ಆಟಗಾರರು ಸ್ಪರ್ಧಿಸುತ್ತಿರುವುದು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದ್ದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೆಎಲ್ ರಾಹುಲ್ ಟೆಸ್ಟ್ ಪಂದ್ಯಗಳಲ್ಲೇ ಅಲ್ಲ ಟಿ20 ಪಂದ್ಯಗಳಲ್ಲೂ ಅದ್ಭುತವಾಗಿ ಆಡುತ್ತಿದ್ದು ಅವರೊಂದಿಗೆ ಆರಂಭಿಕ ಕ್ರಮಾಂಕಕ್ಕಾಗಿ ಸ್ಪರ್ಧಿಸುತ್ತಿರುವುದು ಉತ್ತಮ ಬೆಳೆವಣಿಗೆ ಎಂದು ಹೇಳಿದ್ದಾರೆ.

11 ಮಂದಿ ಆಟಗಾರರಲ್ಲಿ ಒಂದಾಗಿ ನಾವು ಕಣಕ್ಕೀಳಿಯದಿದ್ದಾಗ ಅದು ಬೇಸರ ತರಿಸುತ್ತದೆ. ಆದರೆ ಅದು ಮತ್ತೆ ತಂಡದಲ್ಲಿ ಸ್ಥಾನಪಡೆಯಲು ಉತ್ತೇಜನ ನೀಡುತ್ತದೆ ಎಂದು ಶಿಖರ್ ಧವನ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಶಿಖರ್ ಧವನ್ ರನ್ನು ಕೈಬಿಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video