ಕ್ರಿಕೆಟ್

ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ದಹಿಯಾ ಮತ್ತು ಭಂಡಾರಿ

Guruprasad Narayana
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ವಿಜಯ್ ದಹಿಯಾ ಮತ್ತು ವೇಗದ ಬೌಲರ್ ಅಮಿತ್ ಬಂಢಾರಿ, ಮುಂದಿನ ಆವೃತ್ತಿಗೆ ರಾಷ್ಟ್ರೀಯ ಆಯ್ಕೆದಾರರ (ಹಿರಿಯ ಮತ್ತು ಕಿರಿಯ) ವೃತ್ತಿಗೆ ಅರ್ಜಿ ಸಲ್ಲಿಸಿರುವವರಲ್ಲಿ ಪ್ರಮುಖರು. 
ಬಿಸಿಸಿಐ ಈ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಿರುವುದರಿಂದ ಹಲವಾರು ಮಾಜಿ ಕ್ರಿಕೆಟಿಗರು ಆಯ್ಕೆದಾರರ ಸ್ಥಾನಕ್ಕೆ ಆಸಕ್ತಿ ತೋರಿದ್ದಾರೆ. ಈ ಸ್ಥಾನಕ್ಕೆ ಆಯ್ಕೆಯಾದವರಿಗೆ ಬಿಸಿಸಿಐ ಒಳ್ಳೆಯ ವೇತನವನ್ನು ಕೂಡ ನೀಡುತ್ತದೆ. 
"ಹೌದು, ನಾನು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನಾನು ಯಾವುದೇ ಸ್ಥಾನವನ್ನಿ ನಿರೀಕ್ಷೆ ಮಾಡಿದವನಲ್ಲ. ಆದರೆ ರಾಷ್ಟ್ರೀಯ ಆಯ್ಕೆದಾರನಾಗಿ ಕೆಲಸ ಮಾಡುವುದು ಗೌರವ. ನಾನು ಆಯ್ಕೆಯಾದರೆ, ಅತ್ಯುತ್ತಮವಾದ ಕೆಲಸ ಮಾಡುತ್ತೇನೆ" ಎಂದು ದೆಹಲಿ ರಣಜಿ ತಂಡದ ತರಬೇತುದಾರರಾಗಿದ್ದ ಹಾಗು ಕೊಲ್ಕತ್ತಾ ನೈಟ್ ರೈಡರ್ಸ್ ನ ಉಪ ತರಬೇತುದಾರನಾಗಿದ್ದ 43 ವರ್ಷದ ದಹಿಯಾ ಹೇಳಿದ್ದಾರೆ. 
ದಹಿಯಾ ಭಾರತಕ್ಕೆ 2 ಟೆಸ್ಟ್ ಪಂದ್ಯ ಮತ್ತು 19 ಒಂದು ದಿನದ ಪಂದ್ಯಗಳನ್ನು ಆಡಿದ್ದಾರೆ ದೆಹಲಿ ಮತ್ತು ಉತ್ತರ ಜೋನ್ ಗಾಗಿ 84 ಮೊದಲ ದರ್ಜೆಯ ಪಂದ್ಯಗಳಲ್ಲಿ ಆಡಿದ್ದಾರೆ. 
ಹಾಗೆಯೇ ಭಂಡಾರಿ 95 ಮೊದಲ ದರ್ಜೆಯ ಪಂದ್ಯಗಳನ್ನು ಮತ್ತು ಎರಡು ಒಂದು ದಿನದ ಪದ್ಯಗಳಲ್ಲಿ ಆಡಿದ್ದು, ಅರ್ಜಿ ಸಲ್ಲಿಸಿರುವುದನ್ನು ಧೃಢೀಕರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಂಡಾರಿ ದೆಹಲಿ ರಣಜಿ ತಂಡದ ಸಹ ಮತ್ತು ಬೌಲಿಂಗ್ ತರಬೇತುದಾರರಾಗಿದ್ದರು. 
ಉತ್ತರ ಪ್ರದೇಶದಿಂದ ಇಬ್ಬರು ಮಾಜಿ ಆಟಗಾರರು ಗ್ಯಾನೇಂದ್ರ ಪಾಂಡೆ ಮತ್ತು ಗೋಪಾಲ ಶರ್ಮ ಕೂಡ ಅರ್ಜಿ ಸಲ್ಲಿಸಿದ್ದಾರೆ. ಪಾಂಡೆ ಈಗಾಗಲೇ ಕಿರಿಯರ ತಂಡದ ಆಯ್ಕೆದಾರನಾಗಿದ್ದು, ಈಗ ಹಿರಿಯ ಆಯ್ಕೆದಾರನ ಕೆಲಸದ ಮೇಲೆ ಕಣ್ಣಿಟ್ಟಿದ್ದಾರೆ. ಗೋಪಾಲ್ ಶರ್ಮಾ ಈಗಾಗಲೇ ಒಮ್ಮೆ ರಾಷ್ಟ್ರೀಯ ಆಯ್ಕೆದಾರನಾಗಿ ಕೆಲಸ ಮಾಡಿರುವುದರಿಂದ ಅವರ ಅರ್ಜಿಯ ಬಗ್ಗೆ ಸ್ವಲ್ಪ ಗೊಂದಲ ಮೂಡಿದೆ.
ಮಾಜಿ ಆಫ್ ಸ್ಪಿನ್ನರ್ ಆಶಿಶ್ ಕಪೂರ್ ಕೂಡ ಈ ಸ್ಥಾನೇಕ್ಕೆ ಅರ್ಜಿ ಸಲ್ಲಿಸಿದ್ದಾರೆ. 
SCROLL FOR NEXT