ಕ್ರಿಕೆಟ್

ಮಾಜಿ ಕ್ರಿಕೆಟಿಗ ಎಂಎಸ್‌ಕೆ ಪ್ರಸಾದ್ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ

Vishwanath S
ಮುಂಬೈ: ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ನ್ಯಾಯಾಧೀಶ ಲೋಧ ನೇತೃತ್ವದ ಲೋಧ ಸಮಿತಿ ಮಾಡಿದ್ದ ಶಿಫಾರಸ್ಸನ್ನು ಉಲ್ಲಂಘಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಎಂಎಸ್‌ಕೆ ಪ್ರಸಾದ್ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. 
ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿದ್ದ ಪ್ರಸಾದ್ ಅವರನ್ನು ಸಂದೀಪ್ ಪಾಟೀಲ್ ಅವರ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಆಂಧ್ರ ಪ್ರದೇಶದ 41 ವರ್ಷದ ಪ್ರಸಾದ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರು ಟೆಸ್ಟ್ ಮತ್ತು 17 ಏಕದಿನ ಪಂದ್ಯಗಳನ್ನಾಡಿದ್ದಾರೆ. 
ಇನ್ನು ಆಯ್ಕೆ ಸಮಿತಿಯಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಗಗನ್ ಕೋಡ(ಕೇಂದ್ರ ವಲಯ) ಸ್ಥಾನಪಡೆದಿದ್ದಾರೆ. ಇನ್ನು ಸಮಿತಿಗೆ ಇದೇ ಮೊದಲ ಬಾರಿಗೆ ದಿವಾಂಗ್ ಗಾಂಧಿ(ಪೂರ್ವ ವಲಯ), ಜತೀನ್ ಪರನ್ಜಪೇ(ಪಶ್ಚಿಮ ವಲಯ) ಮತ್ತು ಸರನ್ದೀಪ್ ಸಿಂಗ್(ಉತ್ತರ ವಲಯ) ಮೂವರು ಸದಸ್ಯರು ಸ್ಥಾನಪಡೆದಿದ್ದಾರೆ. 
ಆಯ್ಕೆ ಸಮಿತಿಯ ಸದಸ್ಯರಾಗುವವರು ಕನಿಷ್ಠ ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಹೊಂದಿರಬೇಕು ಎಂದು ಲೋಧ ಸಮಿತಿ ಶಿಫಾರಸ್ಸು ಮಾಡಿತ್ತು. ಆದರೆ ಈ ಶಿಫಾರಸನ್ನು ಬಿಸಿಸಿಐ ಸಂಪೂರ್ಣವಾಗಿ ಉಲ್ಲಂಘಿಸಿದೆ. 
SCROLL FOR NEXT