ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

2ನೇ ಟೆಸ್ಟ್: ಪ್ರಥಮ ಇನ್ನಿಂಗ್ಸ್‌ನಲ್ಲಿ 316ಕ್ಕೆ ಟೀಂ ಇಂಡಿಯಾ ಸರ್ವಪತನ

ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 316 ರನ್ ಗಳಿಗೆ ಸರ್ವಪತನ ಕಂಡಿದೆ.

ವಿರಾಟ್ ಕೊಹ್ಲಿ
Vishwanath S
Updated On : 1 Oct 2016, 12:05 pm
ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 316 ರನ್ ಗಳಿಗೆ ಸರ್ವಪತನ ಕಂಡಿದೆ. 
ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರರಾದ ಶಿಖರ್ ಧವನ್, ಮುರಳಿ ವಿಜಯ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾದರು. ಬಳಿಕ ಬಂದ ಪರ ಚೇತೇಶ್ವರ ಪೂಜಾರ ಅಜೇಯ 87 ರನ್ ಹಾಗೂ ಅಜಿಂಕ್ಯ ರಹಾನೆ ರ 77 ರನ್ ಪೇರಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದರಿಂದ ತಪ್ಪಿಸಿದರು. ಇನ್ನು ರೋಹಿತ್ ಶರ್ಮಾ 2 ರನ್ ಗಳಿಸಿದರೆ, ಅಶ್ವಿನ್ 26 ಗಳಿಸಿ ಔಟಾದರು. 
ಮೊದಲ ದಿನದಾಟ ಅಂತ್ಯಕ್ಕೆ ಭಾರತ 7 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ಇಂದು ಎರಡನೇ ದಿನದಾಟ ಪ್ರಾರಂಭಿಸಿದ ವೃದ್ಧಿಮಾನ್ ಸಾಹಾ ಉತ್ತಮವಾಗಿ ಆಡಿ ಅಜೇಯ 54 ರನ್ ಗಳಿಸಿದರು. ಇನ್ನು ರವೀಂದ್ರ ಜಡೇಜಾ 14 ರನ್ ಗೆ ನಿರ್ಗಮಿಸಿದರು. ಭುವನೇಶ್ವರ್ ಕುಮಾರ್ 5 ರನ್ ಗಳಿಸಿದರೆ ಮೊಹಮ್ಮದ್ ಶಮಿ 14 ರನ್ ಗಳಿಸಿ ಪೆವಿಲಿಯನ್ ಸೇರಿದರು. 

Advertisement

Advertisement

ನ್ಯೂಜಿಲೆಂಡ್ ಪರ ಹೆನ್ರಿ 3, ಪಟೇಲ್, ಬೋಲ್ಟ್ ವಾಗ್ನೆರ್ ತಲಾ 2 ವಿಕೆಟ್ ಪಡೆದಿದ್ದಾರೆ. 
ಇನ್ನು ಪ್ರಥಮ ಇನ್ನಿಂಗ್ಸ್ ಪ್ರಾರಂಭಿಸಿದ ನ್ಯೂಜಿಲೆಂಡ್ 5 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದೆ. 13 ರನ್ ಗಳಿಗೆ ಗುಪ್ಟಿಲ್ ಹಾಗೂ 1 ರನ್ ಗೆ ಲ್ಯಾಥಮ್ ಔಟಾಗಿದ್ದಾರೆ. ನಿಕೋಲ್ಸ್ ಅಜೇಯ 1 ರನ್ ಹಾಗೂ ಟೇಲರ್ 2 ರನ್ ಗಳಿಸಿ ಆಡುತ್ತಿದ್ದಾರೆ. 
ಭಾರತ ಪರ ಭುವನೇಶ್ವರ್, ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement