ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ 10ನೇ ಆವೃತ್ತಿಯಲ್ಲಿ ಕೀಪಿಂಗ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಎಬಿ ಡಿವಿಲಿಯರ್ಸ್ ಖಂಡಿತವಾಗಿಯೂ ನಾನು ವಿಕೆಟ್ ಕೀಪಿಂಗ್ ಮಾಡುವುದರಿಂದ ದೂರ ಉಳಿಯಲಿದ್ದೇನೆ. ನನಗೆ ಅತೀವವಾದ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದು ಹಲವು ವರ್ಷಗಳಿಂದ ಕೀಪಿಂಗ್ ಮಾಡಿದ್ದರಿಂದಾಗಿದೆ. ಹೀಗಾಗಿ ಇನ್ನು ಮುಂದೆ ಕೀಪಿಂಗ್ ಮಾಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಮತ್ತೆ ನಾನು ಕೀಪಿಂಗ್ ಮಾಡಬೇಕಾದರೇ ಕನಿಷ್ಠ ಐದು ವರ್ಷಗಳ ಕಾಲಾವಕಾಶ ಹಿಡಿಯಬಹುದು ಎಂದು ಎಬಿಡಿ ಸ್ಪಷ್ಟಪಡಿಸಿದ್ದಾರೆ.