ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾಕ್ ಟೆಸ್ಟ್ ನಾಯಕ ಮಿಸ್ಬಾ ಉಲ್ ಹಕ್ ವಿದಾಯ

Vishwanath S
ಲಾಹೋರ್: ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸುವ ಮೂಲಕ ಅಂತಾರಾಷ್ಟ್ರೀಯ ಮೂರು ಮಾದರಿ ಕ್ರಿಕೆಟ್ ಗೂ ವಿದಾಯ ಹೇಳಿದಂತಾಗಿದೆ. 
ಜಮೈಕಾದಲ್ಲಿ ಏಪ್ರಿಲ್ 21ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ನನ್ನ ಜೀವನದ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಸರಣಿ ಆಗಲಿದೆ ಎಂದು ಮಿಸ್ಬಾ ಹೇಳಿದ್ದಾರೆ. 
40 ವರ್ಷ ವಯಸ್ಸಿನ ಮಿಸ್ಬಾ ಉಲ್ ಹಕ್ 2010ರಿಂದ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರೂ ಮುಂದೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡುತ್ತೇನೆ ಎಂದು ಹೇಳಿದ್ದಾರೆ.
72 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಿಸ್ಬಾ 44.48ರ ಸರಾಸರಿಯಲ್ಲಿ 4,951 ರನ್ ಕಲೆಹಾಕಿದ್ದಾರೆ. ಮಿಸ್ಬಾ ನಾಯಕತ್ವದಲ್ಲಿ ಪಾಕಿಸ್ತಾನ ತಂಡ 53 ಪಂದ್ಯಗಳನ್ನು ಆಡಿದ್ದು 24 ಗೆಲುವು, 18 ಸೋಲು ಮತ್ತು 11 ಪಂದ್ಯಗಳು ಡ್ರಾ ಕಂಡಿದೆ.  
2015ರಲ್ಲಿ ಮಿಸ್ಬಾ ಉಲ್ ಹಕ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದರು. 
SCROLL FOR NEXT