ರಾಜ್ಕೋಟ್: ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ತಂಡದ ಗುಜರಾತ್ ಲಯನ್ಸ್ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿತು.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ 183 ರನ್ ಗಳ ಗುರಿ ನೀಡಿತು. 184 ರನ್ ಗಳ ಗುರಿ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಆರಂಭಿಕರಾದ ಗೌತಮ್ ಗಂಭೀರ್ 48 ಎಸೆತಗಳಲ್ಲಿ 76 ರನ್ ಮತ್ತು ಕ್ರಿಸ್ ಲಿನ್ 41 ಎಸೆತಗಳಲ್ಲಿ 93 ರನ್ ಗಳ ನೆರವಿನೊಂದಿಗೆ ಗುಜರಾತ್ ಲಯನ್ಸ್ ವಿರುದ್ಧ 10 ವಿಕೆಟ್ ಗಳ ಜಯ ದಾಖಲಿಸಿತು.
ಗುಜರಾತ್ ಪರ ಜೇಸನ್ ರಾಯ್ 14, ಬ್ರೆಂಡನ್ ಮೆಕ್ಕಲಂ 35,ಫಿಂಚ್ 15, ದಿನೇಶ್ ಕಾರ್ತಿಕ್ 47 ಮತ್ತು ಸುರೇಶ್ ರೈನಾ ಅಜೇಯ 68 ರನ್ ಗಳಿಸಿದ್ದಾರೆ.