ನವದೆಹಲಿ: ಶ್ರೀನಗರ ಲೋಕಸಭೆ ಚುನಾವಣೆ ನಂತರ ವಾಪಸ್ ಹೋಗುವ ಸಂದರ್ಭದಲ್ಲಿ ಕೆಲ ಕಾಶ್ಮೀರಿ ಯುವಕರು ಸಿಆರ್'ಪಿಎಫ್ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ತಮ್ಮ ಮನಸ್ಸಿಗೆ ಬಂದ ಯೋಚನೆಗಳನ್ನು ಗಂಭೀರ್ ಯಾವುದೇ ಮುಜುಗರವಿಲ್ಲದೇ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ನಮ್ಮ ದೇಶದ ಸೈನಿಕನಿಗೆ ಬಿದ್ದ ಒಂದೊಂದು ಏಟಿಗೆ ಪ್ರತಿಯಾಗಿ ಕನಿಷ್ಠ 100 ಜಿಹಾದಿಗಳ ಪ್ರಾಣ ಹೋಗಬೇಕು, ಯಾರಿಗೆಲ್ಲಾ ಸ್ವಾತಂತ್ರ್ಯ ಬೇಕೋ ಅವರೆಲ್ಲಾ ಈ ಕೂಡಲೇ ಕಾಶ್ಮೀರ ಬಿಟ್ಟು ಹೊರಡಿ, ಕಾಶ್ಮೀರ ನಮಗೆ ಸೇರಿದ್ದು ಎಂದು ಟ್ವೀಟ್ ಮಾಡಿದ್ದಾರೆ.
For every slap on my army's Jawan lay down at least a 100 jihadi lives. Whoever wants Azadi LEAVE NOW! Kashmir is ours.#kashmirbelongs2us
— Gautam Gambhir (@GautamGambhir)
April 13, 2017ಕೇಸರಿ- ನಮ್ಮ ಆಕ್ರೋಶದ ಬೆಂಕಿ, ಬಿಳಿಬಣ್ಣ- ಜಿಹಾದಿಗಳ ಹೆಣದ ಮೇಲೆ ಹೊದಿಸುವ ಹೊದಿಕೆ, ಹಸಿರು ಬಣ್ಣ ಭಯೋತ್ಪಾದಕತೆಯನ್ನು ವಿರೋಧಿಸುತ್ತದೆ ಎಂಬುದನ್ನು ಭಾರತ ವಿರೋಧಿಗಳು ನಮ್ಮ ದೇಶದ ಭಾವುಟದ ಬಣ್ಣವನ್ನು ಮರೆತಿದ್ದಾರೆ ಎನಿಸುತ್ತದೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಭಾನುವಾರ ಶ್ರೀಗನಗರ ಬದ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಗಲಭೆಕೋರರು ಸಿಆರ್ ಪಿಎಫ್ ಯೋಧನನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos